ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಏಳು ವೃದ್ಧರು ಸೇರಿ 25 ಮಂದಿಗೆ ಕೊರೊನಾ

Last Updated 16 ಜುಲೈ 2020, 17:31 IST
ಅಕ್ಷರ ಗಾತ್ರ

ದಾವಣಗೆರೆ: ಏಳು ಮಂದಿ ವೃದ್ಧರು ಸೇರಿ ಜಿಲ್ಲೆಯ 25 ಮಂದಿಗೆ ಕೊರೊನಾ ಸೋಂಕು ಇರುವುದು ಗುರುವಾರ ದೃಢಪಟ್ಟಿದೆ.

ಕಾಯಿಪೇಟೆಯ 19 ವರ್ಷದ ಯುವಕನಿಗೆ ಶೀತಜ್ವರ ಉಂಟಾಗಿದೆ. ಶೇಖರಪ್ಪ ನಗರದ 24 ವರ್ಷದ ಮಹಿಳೆ, ಎಂಸಿಸಿ ‘ಬಿ’ ಬ್ಲಾಕ್‌ನ 25 ಮತ್ತು 28 ವರ್ಷದ ಮಹಿಳೆಯರು, ಬೀಡಿ ಲೇಔಟ್‌ನ 41 ವರ್ಷದ ಪುರುಷ, ಮುಸ್ತಫಾನಗರದ 54 ವರ್ಷದ ಪುರುಷರಿಗೆ ವೈರಸ್‌ ಕಾಣಿಸಿಕೊಂಡಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಕುರುಬರ ಕೇರಿಯ 67 ವರ್ಷದ ವೃದ್ಧ, ದೊಡ್ಡಬಾತಿಯ 64 ವರ್ಷದ ವೃದ್ಧರಿಗೆ ಕಂಟೈನ್‌ಮೆಂಟ್‌ ವಲಯದ ಸಂಪರ್ಕದಿಂದ ಕೊರೊನಾ ಬಂದಿದೆ.

ಹಾಸಬಾವಿ ಸರ್ಕಲ್‌ನ 35 ವರ್ಷದ ಮಹಿಳೆ, ಆಂಜನೇಯ ಬಡಾವಣೆಯ 63 ವರ್ಷದ ವೃದ್ಧ, ಕೆ.ಬಿ. ಬಡಾವಣೆಯ 56 ವರ್ಷದ ಪುರುಷ, ಡಿಸಿಎಂ ಟೌನ್‌ಶಿಪ್‌ನ 56 ವರ್ಷದ ಮಹಿಳೆ, 65 ವರ್ಷದ ವೃದ್ಧ, ಎಚ್‌ಕೆಆರ್‌ನಗರದ 40 ವರ್ಷದ ಪುರುಷ, ಸರಸ್ವತಿನಗರದ 35 ವರ್ಷದ ಪುರುಷ, ಆನೆಕೊಂಡದ 60 ವರ್ಷದ ವೃದ್ಧರಿಗೆ ಶೀತಜ್ವರ ಎಂದು ಗುರುತಿಸಲಾಗಿದೆ.

ಹರಿಹರ ಗೌಸಿಯಾ ಕಾಲೊನಿಯ 29 ವರ್ಷದ ಪುರುಷನಿಗೆ 22 ವರ್ಷದ ಮಹಿಳೆಯ ಸಂಪರ್ಕದಿಂದ ಸೋಂಕು ಬಂದಿದೆ. ಜಗಳಿಬಾವಿಯ 52 ವರ್ಷದ ಮಹಿಳೆ, 56 ವರ್ಷದ ಪುರುಷನಿಗೆ 33 ವರ್ಷದ ಮಹಿಳೆಯ ಸಂಪರ್ಕದಿಂದ ಸೋಂಕು ಬಂದಿದೆ. ಹರಿಹರ ವಿನಾಯಕನಗರದ 22 ವರ್ಷದ ಯುವಕ ಮತ್ತು ಭಾರತ್‌ ಆಯಿಲ್‌ ಮಿಲ್‌ ಕಾಂಪೌಂಡ್‌ನ 65 ವರ್ಷದ ವೃದ್ಧರಿಗೆ 30 ವರ್ಷದ ಮಹಿಳೆಯ ಸಂಪರ್ಕದಿಂದ ಕೊರೊನಾ ಬಂದಿದೆ.

ಹೊನ್ನಾಳಿಯ ಗೊಂಡಿಚಟ್ನಿಹಳ್ಳಿಯ 22 ವರ್ಷದ ಯುವತಿಗೆ ಕೊರೊನಾ ಬಂದಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಬೆಂಗಳೂರಿನಿಂದ ಬಂದ ತುರ್ಚಘಟ್ಟದ 26 ವರ್ಷದ ಪುರುಷನಲ್ಲೂ ಸೋಂಕು ಕಾಣಿಸಿಕೊಂಡಿದೆ.

ಹರಪನಹಳ್ಳಿ ತಾಲ್ಲೂಕಿನ ಕಮ್ಮತಹಳ್ಳಿಯ 40 ವರ್ಷದ ಪುರುಷನಿಗೆ ಶೀತಜ್ವರ ಎಂದು ಗುರುತಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿರುವ ಹುಬ್ಬಳ್ಳಿಯ 61 ವರ್ಷದ ವೃದ್ಧರಿಗೂ ಕೊರೊನಾ ಬಂದಿದೆ.

ಜಿಲ್ಲೆಯಲ್ಲಿ ಒಟ್ಟು 658 ಮಂದಿಗೆ ಸೋಂಕು ತಗುಲಿದೆ. 22 ಮಂದಿ ಮೃತಪಟ್ಟಿದ್ದಾರೆ. ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 11 ಮಂದಿ ಸೇರಿ ಈವರೆಗೆ 494 ಮಂದಿ ಗುಣಮುಖರಾಗಿದ್ದಾರೆ. 142 ಸಕ್ರಿಯ ಪ್ರಕರಣಗಳಿವೆ. ನಾಲ್ವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT