ಸೋಮವಾರ, ಆಗಸ್ಟ್ 15, 2022
22 °C
46 ಹಿರಿಯರು, 4 ಮಕ್ಕಳು ಸೇರಿ 244 ಮಂದಿ ಗುಣಮುಖರಾಗಿ ಬಿಡುಗಡೆ

ದಾವಣಗೆರೆ: 297 ಮಂದಿಗೆ ಕೊರೊನಾ; ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 297 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ. ಮೂವರು ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 12 ಸಾವಿರ ದಾಟಿದೆ.

ಪಿ.ಜೆ. ಬಡಾವಣೆಯ 75 ವರ್ಷದ ವೃದ್ಧ ಉಸಿರಾಟದ ಸಮಸ್ಯೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ತೊಂದರೆಯಿಂದ ನಿಧನರಾದರು. ಹರಿಹರ ಜೆಸಿ ಬಡಾವಣೆಯ73 ವರ್ಷದ ವೃದ್ಧ ಮತ್ತು ದಾವಣಗೆರೆ ನಿಟುವಳ್ಳಿಯ 60 ವರ್ಷದ ವೃದ್ಧೆ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು.

39 ವೃದ್ಧರು, 17 ವೃದ್ಧೆಯರು, ಆರು ಬಾಲಕರು, ನಾಲ್ವರು ಬಾಲಕಿಯರಿಗೂ ಸೋಂಕು ತಗುಲಿದೆ.

ದಾವಣಗೆರೆ ತಾಲ್ಲೂಕಿನ 118 ಮಂದಿಗೆ ಕೊರೊನಾ ಬಂದಿದೆ. ಗೊಲ್ಲರಹಳ್ಳಿ, ಕೋಲ್ಕುಂಟೆ, ಐಗೂರು, ಕಲಪನಹಳ್ಳಿ, ಹಿರೇ ತೊಗಲೇರಿ, ಕಕ್ಕರಗೊಳ್ಳ, ನೇರ್ಲಿಗೆ, ನಾಗನೂರು, ಯರಗುಂಟೆ, ಕುಕ್ಕವಾಡ, ಆಲೂರಹಟ್ಟಿ, ವೈ.ಎನ್‌. ಕ್ಯಾಂಪ್‌, ಮೈಸರಳ್ಳಿ ಹೀಗೆ ಗ್ರಾಮೀಣ ಪ್ರದೇಶದ 22 ಮಂದಿಗೆ ಸೋಂಕು ಬಂದಿದೆ. ಉಳಿದ 96 ಮಂದಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯವರು.

ಸ್ಪಂದನ ಹೆಲ್ತ್‌ಕೇರ್‌ ಸೆಂಟರ್‌ನ ಒಬ್ಬರು, ಸಿ.ಜಿ. ಆಸ್ಪತ್ರೆಯ ಇಬ್ಬರು, ಕೆಎಸ್‌ಆರ್‌ಟಿಸಿ ಡಿಪೊ, ಆರ್‌ಎಂಸಿ ಪೊಲೀಸ್‌ ಠಾಣೆ, ಹೊಸ ಪೊಲೀಸ್ ಕ್ವಾರ್ಟರ್ಸ್‌, ಡಿಎಚ್‌ಒ ಕಚೇರಿ, ಎಸ್‌ಎಸ್‌ಎಂ, ದೊಡ್ಡಬಾತಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಲಾ ಒಬ್ಬರು ಸಿಬ್ಬಂದಿಗೆ ವೈರಸ್‌ ಬಂದಿದೆ.

ವಿದ್ಯಾನಗರದಲ್ಲಿ ಹತ್ತಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ. ಕೆ.ಬಿ. ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಎಸ್‌ಎಸ್‌ ಬಡಾವಣೆ, ಆಂಜನೇಯ ಬಡಾವಣೆ ಮುಂತಾದ ಕಡೆಗಳಲ್ಲಿ ಐದಕ್ಕಿಂತ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

ಹರಿಹರ ತಾಲ್ಲೂಕಿನಲ್ಲಿ 60, ಚನ್ನಗಿರಿ ತಾಲ್ಲೂಕಿನಲ್ಲಿ 49, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 46, ಜಗಳೂರು ತಾಲ್ಲೂಕಿನಲ್ಲಿ 13 ಮಂದಿಗೆ ಕೊರೊನಾ ಬಂದಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರಪನಹಳ್ಳಿಯ ನಾಲ್ವರು, ರಾಣೆಬೆನ್ನೂರಿನ ಮೂವರು, ಹಿರೆಕೆರೂರು, ಕೊಟ್ಟೂರು, ಹಾವೇರಿ, ಧಾರವಾಡದ ತಲಾ ಒಬ್ಬರು ಹೀಗೆ ಜಿಲ್ಲೆಯ ಹೊರಗಿನ 11 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ.

244 ಮಂದಿ ಗುರುವಾರ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 34 ವೃದ್ಧರು, 12 ವೃದ್ಧೆಯರು, ಒಬ್ಬ ಬಾಲಕ, ಮೂವರು ಬಾಲಕಿಯರೂ ಸೇರಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 12,189 ಮಂದಿಗೆ ಕೊರೊನಾ ಬಂದಿದೆ. 9213 ಮಂದಿ ಗುಣಮುಖರಾಗಿದ್ದಾರೆ. 223 ಮಂದಿ ಮೃತಪಟ್ಟಿದ್ದಾರೆ. 2753 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು