ಶುಕ್ರವಾರ, ಆಗಸ್ಟ್ 14, 2020
26 °C

ತಾಯಿಯ ಮುಖ ನೋಡಲು ಡಿಸಿ ಮೊರೆ ಹೋದ ಮಹಿಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೋವಿಡ್‌–19ನಿಂದಾಗಿ ಮೃತಪಟ್ಟ ತಾಯಿಯ ಮುಖ ನೋಡಲು ಮಹಿಳೆಯೊಬ್ಬರು ಜಿಲ್ಲಾಡಳಿತದ ಮೊರೆ ಹೋದ ಪ್ರಸಂಗ ನಡೆದಿದೆ.

62 ವರ್ಷದ ವೃದ್ಧೆ (ರೋಗಿ ಸಂಖ್ಯೆ 35,944) ಜುಲೈ 10ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಾಯಿಯ ಮುಖವನ್ನು ಹೇಗಾದರೂ ನೋಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಅವರ ಸಹಾಯಕರ ಮೂಲಕ ಮನವಿ ಮಾಡಿದ್ದರು.

‘ಕೋವಿಡ್–19 ಪಾಸಿಟಿವ್ ಬಂದಾಗಿನಿಂದ ನಮ್ಮ ತಾಯಿಯ ಮುಖ ನೋಡಿರಲಿಲ್ಲ. ಮನೆಗೂ ಹೋಗದೆ ನಾಲ್ಕು ದಿನ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದೆ. ವೆಂಟಿಲೇಟರ್‌ಗೆ ವರ್ಗಾಹಿಸುವಾಗಲೂ ತಾಯಿಯನ್ನು ನೋಡಬೇಕು ಎಂಬ ಆಸೆ ಇತ್ತು. ಆದರೆ, ಯಾರೂ ಹೋಗುವಂತಿರಲಿಲ್ಲ. ಮನಸ್ಸಿನಲ್ಲೇ ದುಃಖವನ್ನು ನುಂಗಿಕೊಂಡಿದ್ದೆ. ಆದರೆ, ಸತ್ತ ನಂತರ ತಾಯಿಯ ಮುಖ ನೋಡಲು ಅನುಮತಿ ಸಿಕ್ಕಿತು’ ಎಂದು ಯುವತಿಯು ತಿಳಿಸಿದರು.

‘ಕೊನೆಗೆ ದೂರದಲ್ಲಿ ನಿಂತುಕೊಂಡಿದ್ದೆ. ಮುಚ್ಚಿದ್ದ ತಾಯಿಯ ಮುಖವನ್ನು ಎರಡು ಸೆಕೆಂಡ್ ಮಾತ್ರ ತೋರಿಸಿದರು. ಆಗ ಮನಸ್ಸಿಗೆ ನೆಮ್ಮದಿ ಸಿಕ್ಕಿತು’ ಎಂದು ಯುವತಿ ನಿಟ್ಟುಸಿರುಬಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು