ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕೆಲಸ ಸ್ಥಗಿತದ ನಿರ್ಧಾರಕ್ಕೆ ಎಐಟಿಯುಸಿ ಖಂಡನೆ

Last Updated 13 ಮೇ 2021, 9:07 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ಅಲೆ ನೆಪವಾಗಿಟ್ಟುಕೊಂಡು ಉದ್ಯೋಗ ಖಾತರಿ ಕಾರ್ಮಿಕರ ಕೆಲಸಕ್ಕೆ ಕೊಕ್ ಕೊಡಲು ಸರ್ಕಾರ ತನ್ನ ನಿರ್ಧಾರ ದಿಂದ ಹಿಂದೆ ಸರಿಯಬೇಕು ಎಂದು ಉದ್ಯೋಗ ಖಾತರಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ಒತ್ತಾಯಿಸಿದ್ದಾರೆ.

ನೂರು ದಿನ ಇದ್ದ ನರೇಗಾ ಕೆಲಸವನ್ನು ಕೇಂದ್ರ ಸರ್ಕಾರ ನೂರೈವತ್ತು ದಿನಗಳಿಗೆ ಏರಿಕೆ ಮಾಡಿ ಒಂದು ವರ್ಷವಾದರೂ ಜಾರಿಗೆ ತಂದಿಲ್ಲ. ಸದ್ಯದ ಲಾಕ್ ಡೌನ್ ಪರೀಸ್ಥಿತಿಯಲ್ಲಿ ನಗರಕ್ಕೆ ಗುಳೆ ಹೋದ ಜನರು ಹಳ್ಳಿಗಳಿಗೆ ಮರಳಿ ಜೀವನ ನಡೆಸಲು ನರೇಗಾ ಕೆಲಸವನ್ನೇ ನಂಬಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆ ನರೇಗಾ ಕಾರ್ಮಿಕರಿಗೆ ಕೆಲಸ ಕೊಡದೆ ಇರಲು ತೀರ್ಮಾನಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲಾ ಕಾರ್ಮಿಕರಿಗೂ ನರೇಗಾ ಯೋಜನೆಯಲ್ಲಿ ಕೆಲಸ ಕೊಡಬೇಕು ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಗಾ ರಂಗನಾಥ್, ದಾವಣಗೆರೆ ತಾಲ್ಲೂಕು ಸಂಚಾಲಕ ನಾಗನೂರು ನಿಂಗಪ್ಪ, ತುಂಬಿಗೆರೆ ಪರಶುರಾಮಪ್ಪ, ಜಗಳೂರು ಸಂಚಾಲಕ ಚಿಕ್ಕುಜಿನಿ ಕರಿಯಪ್ಪ, ಚನ್ನಗಿರಿ ಸಂಚಾಲಕ ನಾಗೇನಹಳ್ಳಿ ಅಶೋಕ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT