ಶನಿವಾರ, ಅಕ್ಟೋಬರ್ 1, 2022
23 °C

ಸಿದ್ದರಾಮಯ್ಯ ಸಮಾವೇಶಕ್ಕೆ ಬಂದಿದ್ದ ವೃದ್ಧ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವಕ್ಕೆ ಬಂದಿದ್ದ ಕಲಬುರಗಿ ಜಿಲ್ಲೆಯ ಬಸಣ್ಣ ಮಲ್ಲಪ್ಪ ಗೋಳೆ (65) ನಾಪತ್ತೆಯಾಗಿದ್ದಾರೆ.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಾವಳಗಿ ಬಿ ಗ್ರಾಮದಿಂದ ಕಲಬುರಗಿಗೆ ಬಂದ ಬಸಣ್ಣ ಅವರು ಆಗಸ್ಟ್ 2ರಂದು ಬಸ್ ಹತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಅವರನ್ನು ಕರೆ ತಂದಿದ್ದವರು ಬಸ್‌ನಲ್ಲಿಯೇ ಕೂರಿಸಿ ಸಮಾವೇಶಕ್ಕೆ ಹೋಗಿದ್ದಾರೆ. ಸಮಾವೇಶ ಮುಗಿಸಿ ಬಂದು ನೋಡಿದಾಗ ಬಸಣ್ಣ ಅವರು ಇರಲಿಲ್ಲ. ಬೇರೊಂದು ಬಸ್‌ನಲ್ಲಿ ಹತ್ತಿ ಹೋಗಿರಬಹುದು ಎಂದು ತಿಳಿದು ಅಲ್ಲಿಂದ ಹೊರಟಿದ್ದಾರೆ.

ತಂದೆ ವಾಪಸ್ ಬಾರದೇ ಇದ್ದುದರಿಂದ ಆತಂಕಗೊಂಡ ಮಕ್ಕಳು ಭಾನುವಾರ ದಾವಣಗೆರೆಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಮಾವೇಶ ನಡೆದ ಶಾಮನೂರು ಪ್ಯಾಲೇಸ್ ಮೈದಾನ, ಅಕ್ಕಪಕ್ಕದ ಹೋಟೆಲ್‌ಗಳು, ವೃದ್ಧಾಶ್ರಮಗಳಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ.

‘ಸಮಾವೇಶಕ್ಕೆ ಬಂದ ನಮ್ಮ ತಂದೆ ಊಟ ಮಾಡಲು ಹೋಗಿ ಬಸ್‌ ಯಾವುದು ಎಂದು ತಿಳಿಯದೇ ಹೊರಟು ಹೋಗಿರಬಹುದು. ದಾವಣಗೆರೆಯ ಪೊಲೀಸರಿಗೆ ದೂರು ನೀಡಲು ಹೋದಾಗ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಕಲಬುರಗಿ ಗ್ರಾಮಾಂತರ ಠಾಣೆಗೆ ಈ ಕುರಿತು ದೂರು ನೀಡಿದ್ದೇವೆ’ ಎಂದು ಬಸಣ್ಣ ಅವರ ಕಿರಿಯ ಪುತ್ರ ಶ್ರೀಕಾಂತ್ ತಿಳಿಸಿದರು.

ಸುಳಿವು ಸಿಕ್ಕವರು 9901056856, 9901572823 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು