ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಉಪ ಮಾರುಕಟ್ಟೆ ಲೋಕಾರ್ಪಣೆಗೆ ಸಿದ್ಧ

Last Updated 14 ನವೆಂಬರ್ 2020, 15:27 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಮೀಪದ ನಾಗೇನಹಳ್ಳಿ ಬಳಿ ಎಪಿಎಂಸಿ ಉಪ ಮಾರುಕಟ್ಟೆ ಕಟ್ಟಡ ಹಾಗೂ ಗೋದಾಮುಗಳು ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿವೆ.

ನ.17 ರಂದು ಮಧ್ಯಾಹ್ನ 12ಕ್ಕೆ ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ ಕೆ. ಮಾಡಾಳ್ ವಿರೂಪಾಕ್ಷಪ್ಪ ಗೋದಾಮು ಉದ್ಘಾಟಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಮುಚ್ಚು ಹರಾಜು ಕಟ್ಟೆ ಉದ್ಘಾಟಿಸಿಲಿದ್ದಾರೆ ಎಂದು ಚನ್ನಗಿರಿ ಎಪಿಎಂಸಿ ಅಧ್ಯಕ್ಷ ಜಿ.ಬಿ. ಜಗನ್ನಾಥ್ ಮಾಹಿತಿ ನೀಡಿದರು.

₹ 4 ಕೋಟಿ ವೆಚ್ಚದಲ್ಲಿ 7 ಎಕರೆ ಪ್ರದೇಶದಲ್ಲಿ ಮೂರು ಬೃಹತ್ ಗೋದಾಮುಗಳು ಹಾಗೂ ಒಂದು ವಿಶಾಲ ಮುಚ್ಚು ಹರಾಜು ಕಟ್ಟೆ ನಿರ್ಮಾಣಗೊಂಡಿವೆ. 2013-14ನೇ ಸಾಲಿನ ನಬಾರ್ಡ್‌ ಡಬ್ಲ್ಯುಐಎಫ್ (ಹೆಚ್ಚುವರಿ) ಯೋಜನೆಯಲ್ಲಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ನಿರ್ಮಿಸಲಾಗಿದೆ.

ಪ್ರತಿ ಗೋದಾಮು 1000 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. ಸಂತೇಬೆನ್ನೂರು ಸುತ್ತ 50 ಕಿ.ಮೀ. ವ್ಯಾಪ್ತಿಯ ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ದಾಸ್ತಾನು ಗೋದಾಮುಗಳಿರದ ಕಾರಣಉಪ ಮಾರುಕಟ್ಟೆ ಬೇಡಿಕೆ ಇತ್ತು. ಈಗ ಉಪ ಮಾರುಕಟ್ಟೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT