ದಾವಣಗೆರೆ: ಕಲಾಲ್ ಕಾಟಿಕ್ ಸಮಾಜಕ್ಕೆ ಪ್ಯಾಕೇಜ್ ನೀಡಲು ಮನವಿ

ದಾವಣಗೆರೆ: ಕುರಿ, ಮೇಕೆ ಮಾಂಸ ವ್ಯಾಪಾರ ಮಾಡಿ ಬದುಕುವ ಸೂರ್ಯವಂಶ ಕ್ಷತ್ರೀಯ ಕಲಾಲ್ ಕಾಟಿಕ್ ಸಮಾಜ ಕೊರೊನಾ ಮತ್ತು ಲಾಕ್‌ಡೌನ್ ಕಾರಣದಿಂದ ತೊಂದರೆಗೆ ಸಿಲುಕಿದೆ. ಈ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮೂಲಕ ದಾವಣಗೆರೆ ಸಿಟಿ–ಹರಿಹರ ಟೌನ್ ಕಾಟಿಕ್ ಸಂಘ, ದಾವಣಗೆರೆ ಕುರಿ-ಮೇಕೆ ಮಾಂಸ ಮಾರಾಟಗಾರರ ಸಂಘದ ಮುಖಂಡರು ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಎಲ್ಲ ಎಪಿಎಂಸಿ ಕುರಿ-ಮೇಕೆ ಮಾರುಕಟ್ಟೆಗಳು ಲಾಕ್‌ಡೌನ್‌ನಿಂದ ನಿಂತು ಹೋಗಿದೆ. ಮಾಂಸದ ವ್ಯಾಪಾರಸ್ತರಿಗೆ ಎಲ್ಲೂ ಸಹ ಖರೀದಿ ಮಾರುಕಟ್ಟೆಗಳೂ ಇಲ್ಲ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ಮೊದಲ ಅಲೆ ಬಂದಾಗಲೂ ಮನವಿ ಸಲ್ಲಿಸಲಾಗಿತ್ತು. ಆಗಲೂ ನಮ್ಮನ್ನು ಕೋವಿಡ್ ಪ್ಯಾಕೇಜ್‌ನಿಂದ ಕೈಬಿಡಲಾಗಿತ್ತು. ಈ ಬಾರಿಯೂ ಸೇರಿಸಿಲ್ಲ. ನಮ್ಮ ಆರ್ಥಿಕ ಜೀವನ ದುಸ್ತರವಾಗಿರುವುದರಿಂದ, ನಮ್ಮ ದಿನ ನಿತ್ಯದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಈ ಸಮಾಜಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಗೌರವಾಧ್ಯಕ್ಷ ಎಚ್.ವೈ. ರೇವಣಪ್ಪ ಖಜೂರಕರ್, ಅಧ್ಯಕ್ಷ ಮಾಲತೇಶ್ ಪಿ. ಕಲಾಲ್ ಪತ್ತೇಪುರಿ, ಪ್ರಧಾನ ಕಾರ್ಯದರ್ಶಿ ತಿಲಕ್ (ಏಕನಾಥ್) ಬನೂಕಂಡಿ ಅವರೂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.