ಬುಧವಾರ, ಜನವರಿ 20, 2021
21 °C

ಮಣ್ಣು ಮುಕ್ಕ ಮಾರಾಟಕ್ಕೆ ಯತ್ನ: ವಿದ್ಯಾರ್ಥಿ ಸೇರಿ ಐವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇ‌ಲ್ಲಿನ ಪಿ.ಜೆ.ಬಡಾವಣೆಯ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಮಣ್ಣು ಮುಕ್ಕ (ಎರಡು ತಲೆಯ ಹಾವು) ಮಾರಾಟ ಮಾಡಲು ಯತ್ನಿಸುತ್ತಿರುವ ವೇಳೆ ವಿದ್ಯಾರ್ಥಿ ಸೇರಿ ಐದು ಮಂದಿಯನ್ನು ಬಂಧಿಸಿರುವ ಸಿಇಎನ್ ಠಾಣೆಯ ಪೊಲೀಸರು ಮೂರು ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕು ಓಬೇನಹಳ್ಳಿಯ ಗಣೇಶ್ (28), ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದ ಐಟಿಐ ವಿದ್ಯಾರ್ಥಿ ಅಭಿಲಾಷ್ (21), ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಅಂಗುರು ಗ್ರಾಮದ ನಾಗರಾಜ (34), ಮುತ್ತಪ್ಪ (27) ಹಾಗೂ ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆಯ ಪ್ರಜ್ವಲ್ (31) ಬಂಧಿತರು.

ಹಾವುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ವಿಶ್ವೇಶ್ವರಯ್ಯ ಪಾರ್ಕ್‌ ಬಳಿ ನಿಂತಿದ್ದಾಗ ಮಾಹಿತಿ ಆಧರಿಸಿ ಉಪವಲಯ ಅರಣ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಅರಣ್ಯ ರಕ್ಷಕ ಬರ್ಕತ್ ಅಲಿ ಅವರ ಜೊತೆಗೂಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಸ್ಪಿ ಹನುಮಂತರಾಯ, ಎಎಸ್‌ಪಿ ಎಂ.ರಾಜೀವ್, ಡಿಸಿಆರ್‌ಬಿಯ ಡಿವೈಎಸ್‌ಪಿ ಬಸವರಾಜ್ ಬಿ.ಎಸ್.ಅವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಠಾಣೆಯ ಎಸ್ಐ ಬಿ.ವಿ.ಗಿರೀಶ್, ಸಿಬ್ಬಂದಿ ಪಿ. ನಾಗರಾಜ, ವೈ.ಬಿ.ರವಿ, ಎಸ್‌.ಲೋಹಿತ್, ಬಿ.ನಾಗರಾಜ, ಎಸ್.ಮಲ್ಲಿಕಾರ್ಜುನ ಹಾದಿಮನಿ, ದ್ಯಾಮೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು