ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತಿ ಮೂಡಿಸುವ ಕಲಾಕೃತಿ

Last Updated 24 ಮಾರ್ಚ್ 2020, 10:54 IST
ಅಕ್ಷರ ಗಾತ್ರ

ದಾವಣಗೆರೆ: ನೋವೆಲ್‌ ಕೊರೊನಾ ವೈರಸ್‌ 2019 (ಕೋವಿಡ್‌ 19) ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕುವೆಂಪುನಗರದಲ್ಲಿ ‘ಸಂಕಲನ ದಾವಣಗೆರೆ’ ಸಂಸ್ಥೆಯ ಕಲಾಕೃತಿಗಳು ಮಾಡುತ್ತಿವೆ.

ರವೀಂದ್ರ ಅರಳಗುಪ್ಪಿ– ಉಷಾ ಎಂ.ಜಿ. ಎಂಬ ಕಲಾವಿದ ದಂಪತಿ ಮತ್ತು ಅವರ ಮಗಳು ಇಂಪನಾ ಸೇರಿಕೊಂಡು ಹಳೇ ಪತ್ರಿಕೆ, ಬಳಸಿದ ಧರ್ಮೋಕೋಲ್‌, ಪೈಪ್‌ ಮುಂತಾದವುಗಳನ್ನು ಉಪಯೋಗಿಸಿಕೊಂಡು ಈ ಕಲಾಕೃತಿಗಳನ್ನು ರಚಿಸಿದ್ದಾರೆ.

‘ಮಾಸ್ಕ್‌ ಧರಿಸೋಣ, ಕೈ ಸ್ವಚ್ಛವಾಗಿ ತೊಳೆಯೋಣ, ನಮಸ್ತೆ ಹೇಳೋಣ, ಕೈ ಕುಲುಕಿಸುವುದು ಬಿಡೋಣ’ ಮುಂತಾದ ಘೋಷವಾಕ್ಯಗಳಿರುವ ಚಿತ್ರಗಳು ಗಮನ ಸೆಳೆಯುತ್ತಿವೆ. ಮಾರ್ಚ್‌ 21ರಿಂದ 31ರ ವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ರಸ್ತೆ ಬದಿಯಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಜನತಾ ಕರ್ಫ್ಯೂ ಪ್ರಯುಕ್ತ ಭಾನುವಾರ ಮಾತ್ರ ಅವುಗಳನ್ನು ಹೊರಗೆ ಇಟ್ಟಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT