ಸೋಮವಾರ, ಮಾರ್ಚ್ 27, 2023
29 °C
ಪಕ್ಷದ ಕಚೇರಿ ಸ್ಥಾಪನೆಗೆ ಸ್ವಾಗತ

ಬ್ಯಾನರ್‌ನಲ್ಲಿ ಎಂ.ಪಿ ರವೀಂದ್ರ ಫೋಟೊ ಇಲ್ಲದಿರುವುದಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಕಾಂಗ್ರೆಸ್ ಬ್ಲಾಕ್ ಸಮಿತಿಯ ಪ್ರತ್ಯೇಕ ಕಚೇರಿ ಆರಂಭಿಸಿರುವುದು ಸ್ವಾಗತಾರ್ಹ. ಆದರೆ, ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರ ಫೋಟೊವನ್ನು ಬ್ಯಾನರ್‌ನಲ್ಲಿ ಕೈಬಿಟ್ಟಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎಂ.ವಿ. ಅಂಜಿನಪ್ಪ ತಿಳಿಸಿದರು.

ಪಟ್ಟಣದ ಬಾಣಗೇರಿ ಕಾಂಗ್ರೆಸ್ ಕಚೇರಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿದ್ದ ಪಕ್ಷದ ಮುಖಂಡರು, ಹೊಸ ಕಚೇರಿಯಲ್ಲಿ ನಡೆದ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

2008ರಲ್ಲಿ ಎಂ.ಪಿ. ಪ್ರಕಾಶ್ ಅವರು ಸೋತಾಗ ಅವರ ಪುತ್ರ ಎಂ.ಪಿ. ರವೀಂದ್ರ ಅವರು ಪಕ್ಷವನ್ನು ಸಂಘಟಿಸಿ, ಶಾಸಕರಾಗಿ ಐದು ವರ್ಷ ದಕ್ಷ ಆಡಳಿತ ನಡೆಸಿದ್ದಾರೆ. ತಾಲ್ಲೂಕನ್ನು ಮತ್ತೆ ಬಳ್ಳಾರಿಗೆ ಸೇರಿಸಿ ಕಲ್ಯಾಣ ಕರ್ನಾಟಕ ಸವಲತ್ತು ಕಲ್ಪಿಸಿಕೊಡುವುದು ಸೇರಿ ಅನೇಕ ಯೋಜನೆಗಳ ಜಾರಿಗೆ ಶ್ರಮಿಸಿದ್ದಾರೆ. ಅಂತಹ ನಾಯಕರ ಫೋಟೊ ಹಾಕದೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಸಹಕಾರ ಸಂಘದ ಚುನಾವಣೆ, ಮತ್ಯಾವುದೋ ಚುನಾವಣೆ ಬಂದಾಗ ದಿ.ಎಂ.ಪಿ. ರವೀಂದ್ರ ಅವರ ಫೋಟೊ ಬಳಸುತ್ತಾರೆ. ಆದರೆ, ಕಚೇರಿ ಉದ್ಘಾಟನೆಗೆ ಮಾತ್ರ ಹಾಕದಿರುವುದು ಎಷ್ಟು ಸರಿ? ಇದರ ಕುರಿತು ಚಿಗಟೇರಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಬಿ.ಕೆ. ಪ್ರಕಾಶ್ ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ತೆರಳಿ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಮುಖಂಡರಾದ ಚಿಕ್ಕೇರಿ ಬಸಪ್ಪ, ವೆಂಕಟೇಶ್, ಹುಲಿಕಟ್ಟೆ ಚಂದ್ರಪ್ಪ, ವಸಂತಪ್ಪ, ಗೊಂಗಡಿ ನಾಗರಾಜ್, ಹಲಗೇರಿ ಮಂಜಪ್ಪ, ರಾಮಪ್ಪ, ಉಮಾಕಾಂತ, ವಾಗೀಶ ರಾಯದುರ್ಗ, ದಾದಾ ಖಲಂದರ್, ಉದಯಶಂಕರ್, ಬಸವರಾಜ್ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.