ಎರಡು ದಿನಗಳಿಂದ ಸುರಿದ ಮಳೆಗೆ ಸೂಳೆಕೆರೆ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರಶಾಂತ್ ಅವರ ಗದ್ದೆಗೆ ಅಳವಡಿಸಿದ್ದ ಪಂಪ್‌ಸೆಟ್‌ನ ಪ್ಯಾನೆಲ್ ಬೋರ್ಡ್ ಹಳ್ಳದ ನೀರಲ್ಲಿ ಮುಳುಗಿತ್ತು. ಮಂಗಳವಾರ ಮುಂಜಾನೆ ಅದನ್ನು ಎತ್ತಿ ಮೇಲಿಡಲು ಹೋದಾಗ ವಿದ್ಯುತ್ ಪ್ರವಹಿಸಿ ಮೃತರಾಗಿದ್ದಾರೆ.
ಮುಂಜಾನೆ ಮನೆಯಿಂದ ಹೊರ ಹೋಗಿದ್ದ ಅವರು ಸಂಜೆಯಾದರೂ ಬಾರದಿದ್ದರಿಂದ, ಮನೆಯವರು ಹುಡುಕಾಟ ನಡೆಸಿದ್ದರು. ಕೊನೆಗೆ ಪ್ರಶಾಂತ್ ಅವರ ಶವ ಹಳ್ಳದ ಬದಿಯಲ್ಲಿ ಪತ್ತೆಯಾಯಿತು. ಬೆಸ್ಕಾಂ ಮತ್ತು ಪೊಲೀಸರಿಗೆ ಕುಟುಂಬದವರು ಮಾಹಿತಿ ನೀಡಿದರು. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.