ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಲಸಿಕೆ ಬಗ್ಗೆ ನಂಬಿಕೆ ಇರಲಿಲ್ಲ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌

Last Updated 7 ಜೂನ್ 2021, 5:53 IST
ಅಕ್ಷರ ಗಾತ್ರ

ದಾವಣಗೆರೆ: ಲಸಿಕೆ ಬಗ್ಗೆ ಬಿಜೆಪಿಗೆ ಅಪನಂಬಿಕೆ ಮತ್ತು ಭಯ ಇತ್ತು. ಹಾಗಾಗಿಯೇ ಜನವರಿಯಲ್ಲೇ ದೇಶಕ್ಕೆ ಲಸಿಕೆ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿ, ಜಿಲ್ಲೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಮಾರ್ಚ್‌ವರೆಗೆ ಕಾದು ಬಳಿಕ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ಆರೋಪಿಸಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ಮೂರನೇ ಪರೀಕ್ಷೆ ನಡೆಯದೇ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಆಗ ಪರೀಕ್ಷೆ ಪೂರ್ಣವಾದ ನಂತರ ಲಸಿಕೆ ಪ್ರಯೋಗ ನಡೆಯಲಿ. ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸದ್ಯಸರು ಮೊದಲು ಲಸಿಕೆ ಪಡೆಯಲಿ ಎಂದು ಕಾಂಗ್ರೆಸ್ ಹೇಳಿದ್ದು ನಿಜ. ಬಿಜೆಪಿಯವರು ಮೊದಲು ಲಸಿಕೆ ಪಡೆಯದೇ ಆಶಾ ಕಾರ್ಯಕರ್ತರು, ಕೊರೊನಾ ವಾರಿಯರ್ಸ್ ಮೇಲೆ ಲಸಿಕೆ ಪ್ರಯೋಗ ಮಾಡಿಸಿದ್ದರು. ಬಳಿಕ ತೆಗದುಕೊಂಡಿದ್ದರು. ಈಗ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಮೇಲೆ ಸಂಸದರು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವಿದೇಶಗಳಲ್ಲಿ ಅಲ್ಲಿನ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಮೊದಲು ತಾವು ಲಸಿಕೆ ಪಡೆದು ಜನರಲ್ಲಿ ಆತ್ಮ ವಿಶ್ವಾಸ ಮೂಡಿಸಿದರು. ಆದರೆ ನಮ್ಮ ಪ್ರಧಾನಿ ಮೋದಿ ಮತ್ತು ಸಂಸದರು ಜನರಿಗೆ ಲಸಿಕೆ ಹಾಕಿಸಿ ಅದರ ಪರಿಣಾಮ ನೋಡಿಕೊಂಡು ಬಳಿಕ ಲಸಿಕೆ ಹಾಕಿಸಿಕೊಂಡರು ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT