ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಮುಖಂಡ ವಾಗೀಶ್‌ ಸ್ವಾಮಿ ಕಾಂಗ್ರೆಸ್ ಸೇರ್ಪಡೆ

Published 12 ಏಪ್ರಿಲ್ 2024, 5:34 IST
Last Updated 12 ಏಪ್ರಿಲ್ 2024, 5:34 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‍ರವರು ಅವರನ್ನು ಬೆಂಬಲಿಸಿ ಜಿಲ್ಲಾ ಮಾಜಿ ಸದಸ್ಯ, ಬಿಜೆಪಿ ಮುಖಂಡ ಬಿ.ಎಂ. ವಾಗೀಶ್‍ಸ್ವಾಮಿ ಹಾಗೂ ಮಲೇಬೆನ್ನೂರಿನ ನಾಲ್ವರು ಪುರಸಭಾ ಸದಸ್ಯರು ಸೇರಿದಂತೆ ಅನೇಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಗುರುವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ವಾಗೀಶ್‌ ಸ್ವಾಮಿ ಹಾಗೂ ಮಲೇಬೆನ್ನೂರು ಪುರಸಭೆ ಬಿಜೆಪಿ ಸದಸ್ಯರಾದ ಮಂಜುನಾಥ್‌, ಗೌಡ್ರು ಮಂಜುನಾಥ್, ಅಕ್ಕಮ್ಮ ಬಿ.ಸುರೇಶ್, ಪಿ.ಆರ್‌.ಸುಧಾ ಸೇರ್ಪ‍ಡೆಗೊಂಡರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಜನಪರ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಮನಸೋತು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ, ಬಿಜೆಪಿ ಪಕ್ಷದಿಂದ ನನ್ನನ್ನು ಉಚ್ಚಾಟಿಸಿಲ್ಲ’ ಎಂದು ವಾಗೀಶ್ ಸ್ವಾಮಿ ಹೇಳಿದರು.

ಸೇರ್ಪಡೆಯಾದ ಮುಖಂಡರು: ಮುಖಂಡರಾದ ಸುರೇಶ್ ಬಿ., ಚಂದ್ರಪ್ಪ ಬಿ., ಗೋವಿನಹಾಳು ದಯಾನಂದ್, ರಾಜಪ್ಪ ಕೆ.ಜಿ., ಕಡೆಮನಿ ದೇವೆಂದ್ರಪ್ಪ ಹೊಳೆಸಿರಿಗೆರೆ, ಮಂಜುನಾಥ್ ಸಿರಿಗೆರೆ, ಮಲ್ಲೇಶಪ್ಪ ಮಾಳಿಗಿ, ಪ್ರಕಾಶ್, ಕಡ್ಲೆಗೊಂದಿ ಕೇಶವಮೂರ್ತಿ, ಓಬಳೇಶಪ್ಪ ಲೋಕಿಕೆರೆ, ಮಂಜಣ್ಣ ಕುರಿ, ಆನಂದಪ್ಪ ಕಲ್ಕೆರೆ ಕ್ಯಾಂಪ್, ನಾಗಣ್ಣ ಸುಲ್ತಾನಿಪುರ, ಎನ್.ಬಿ.ಗಂಗಾಧರಪ್ಪ ವಕೀಲರು ಹೊಳೆ ಸಿರಿಗೆರೆ, ಪಂಚಮಸಾಲಿ ಸಮಾಜದ ಅಶೋಕ್‌, ವಿಜಯಕುಮಾರ್ ಹದಡಿ, ಎಲ್.ಆರ್.ಕರಿಯಣ್ಣ ಸುಲ್ತಾನಿಪುರ, ನಿಂಗಪ್ಪ ಮೆಣಸಿನಕಾಯಿ, ಶ್ರೀನಿವಾಸ ಭಜರಂಗಿ, ಆಕಾಶ್, ಬಿ. ಮಹಾರುದ್ರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು.

ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರ್, ಯೂನಿಯನ್ ಬ್ಯಾಂಕ್‍ನ ಸಿರಿಗೆರೆ ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಮಂಜುನಾಥ ಪಟೇಲ್, ಆನಂದಪ್ಪ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಹುಲ್ಮನಿ ಗಣೇಶ್ ಉಪಸ್ಥಿತರಿದ್ದರು.

ಪುರಸಭಾ ಪಕ್ಷಾಂತರ ಪರ್ವ ಆರಂಭ
ಮಲೇಬೆನ್ನೂರು: ಪುರಸಭೆಯ 18ನೇ ವಾರ್ಡ್‌ ಪ್ರತಿನಿಧಿಸುತ್ತಿದ್ದ ಮಂಜುನಾಥ್‌ 6ನೇ ವಾರ್ಡ್‌ ಗೌಡ್ರ ಮಂಜಣ್ಣ 17ನೇ ವಾರ್ಡಿನ ಅಕ್ಕಮ್ಮ 8ನೇ ವಾರ್ಡ್ ಪಿ.ಆರ್‌. ಸುಧಾ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಲೋಕಸಭಾ ಚುನಾವಣೆಗೂ ಮುನ್ನ ಈ ನಾಲ್ವರು ಸದಸ್ಯರು ಸೇರ್ಪಡೆಯಾಗುವ ಮೂಲಕ ಬಿಜೆಪಿ ಹಾಗೂ ವಾರ್ಡ್‌ನ ಮತದಾರರಿಗೂ ಶಾಕ್‌ ನೀಡಿದೆ. ಕಾಂಗ್ರೆಸ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಬಿ. ಅಬಿದ್‌ ಅಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್.‌ ಮಲ್ಲಿಕಾರ್ಜುನ್ ಅವರು ಪಟ್ಟಣದ ವಿವಿಧ ಮುಖಂಡರ ಮನೆಗೆ ಭೇಟಿ ನೀಡಿ ಪ್ರಚಾರ ಕಾರ್ಯ ಹಾಗೂ ಈದ್ ಉಲ್ ಫಿತ್ರ್‌ ಶುಭಾಶಯ ಕೋರಿದರು.
‘ಶಿವನಹಳ್ಳಿ ರಮೇಶ್ ಜೊತೆ ಮಾತನಾಡುವೆ’
ದಾವಣಗೆರೆ: ‘ಶಿವನಹಳ್ಳಿ ರಮೇಶ್ ಅವರು ಬಿಜೆಪಿ ಸೇರ್ಪಡೆಯಾಗಿರುವ ಪ್ರತಿಕ್ರಿಯೆ ನೀಡಿ ‘ಅವರುಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರಲಿಲ್ಲ ಅವರನ್ನು ಮಾತನಾಡಿಸುವೆ’ ಎಂದರು. ‘ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗುತ್ತಿದ್ದು ಸಾಂಕೇತಿಕವಾಗಿ ಮೊದಲು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇವೆ. ಬಳಿಕ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಮೊದಲ ಹಂತದ ಮತದಾನ ಮುಗಿದ ಬಳಿಕ ರಾಜ್ಯ ರಾಷ್ಟ್ರ ನಾಯಕರು ದಾವಣಗೆರೆ ಕ್ಷೇತ್ರದಲ್ಲಿ ಮತ ಪ್ರಚಾರ ಕೈಗೊಳ್ಳಲಿದ್ದಾರೆ’ ಎಂದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT