ಹರಿಹರ: ರಾಹುಲ್ ಗಾಂಧಿ ಪ್ರಚಾರಕ್ಕೆ ಕಾಲಿಟ್ಟಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುವುದು ಖಚಿತ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರಕ್ಕೆ ಸೋಮವಾರ ಬಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರುವುದು ಕಳೆದ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ರಾಹುಲ್ ಈಗ ಬೆಳಗಾವಿಗೆ ಬಂದಿದ್ದು, ಅಲ್ಲೂ ಕಾಂಗ್ರೆಸ್‌ಗೆ ಸೋಲಾಗಲಿದೆ’ ಎಂದರು.

‘ಮೋದಿ ಪ್ರಚಾರಕ್ಕೆ ಬಂದಲ್ಲೆಲ್ಲಾ ಬಿಜೆಪಿ ದಿಗ್ವಿಜಯ ಸಾಧಿಸುತ್ತದೆ. ಪ್ರಧಾನಿ ಮೋದಿ ಪ್ರಚಾರಕ್ಕೆ ಹೋಗಿದ್ದ ರಾಜ್ಯಗಳಲ್ಲೆಲ್ಲ ಬಿಜೆಪಿ ಅಭೂತ ಪೂರ್ವ ವಿಜಯ ಸಾಧಿಸಿದೆ. ಅದರಂತೆ ರಾಜ್ಯದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜನಗರದಿಂದ ಆರಂಭ ವಾದ ವಿಜಯ ಸಂಕಲ್ಪ ಯಾತ್ರೆ ಹರಿಹರದಲ್ಲಿ ಮುಕ್ತಾಯವಾಗಿದೆ. ಯಾತ್ರೆಯುದ್ದಕ್ಕೂ ದೊರೆತಿರುವ ಜನಬೆಂಬಲ ಗಮನಿಸಿದರೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದರು.

ಸಂಸದ ಜಿ.ಎಂ.ಸೀದ್ದೇಶ್ವರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್, ಮಾಜಿ ಶಾಸಕ ಬಿ.ಪಿ.ಹರೀಶ್, ಯಾತ್ರೆಯ ಉಸ್ತುವಾರಿಗಳಾದ ದತ್ತಾತ್ರೇಯ, ಮುಖಂಡರಾದ ಎನ್.ಜಿ.ನಾಗನಗೌಡ, ಚಂದ್ರಶೇಖರ್ ಪೂಜಾರ್, ಎಚ್.ಶಿವಾನಂದಪ್ಪ, ನಗರಸಭಾ ಸದಸ್ಯರಾದ ಎಬಿಎಂ ವಿಜಯಕುಮಾರ್, ಅಶ್ವಿನಿ ಕೃಷ್ಣ, ರಜನಿಕಾಂತ್, ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಬಾತಿ ಚಂದ್ರಶೇಖರ್, ಅಣ್ಣಪ್ಪ ಐರಣಿ, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ಸುಮನ್ ಖಮಿತ್ಕರ್, ಅಂಬುಜಾ ರಾಜೋಳಿ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.