ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 10 ಮಂದಿಗೆ ಕಪ್ಪು ಶಿಲೀಂಧ್ರ

Last Updated 4 ಜೂನ್ 2021, 4:16 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕಪ್ಪು ಶಿಲೀಂಧ್ರ ಇರುವುದು ಗುರುವಾರ ದೃಢಪಟ್ಟಿದೆ. ಅಲ್ಲಿಗೆ ಒಟ್ಟು ಪ್ರಕರಣಗಳ ಸಂಖ್ಯೆ 41ಕ್ಕೆ ಏರಿದೆ.

ಮ್ಯೂಕರ್‌ಮೈಕೋಸಿಸ್‌ ಎಂದು ಈ ರೋಗವನ್ನು ಕರೆಯಲಾಗುತ್ತಿದೆ. 23 ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

16 ಮಂದಿ ಎಸ್‌ಎಸ್ಐಎಂಎಸ್‌ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ.

ಕೊರೊನಾದಿಂದ ಏಳು ಮಂದಿ ಸಾವು: ಕೊರೊನಾ ಸೋಂಕಿನಿಂದ ಏಳು ಮಂದಿ ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ.

ಹರಿಹರ ತಾಲ್ಲೂಕಿನ ಹನಗವಾಡಿಯ 45 ವರ್ಷದ ಪುರುಷ, ಹಿಂಡಸಘಟ್ಟದ 67 ವರ್ಷದ ವೃದ್ಧೆ, ಗುತ್ತೂರಿನ 55 ವರ್ಷದ ಪುರುಷ, ದಾವಣಗೆರೆ ತಾಲ್ಲೂಕಿನ ಕುಕ್ಕುವಾಡ ಕೋಳೇನಹಳ್ಳಿಯ 45 ವರ್ಷದ ಪುರುಷ, ದೊಡ್ಡಬೂದಿಹಾಳ್‌ನ 44 ವರ್ಷದ ಮಹಿಳೆ, ವಕ್ಕಲಿಗರ ಪೇಟೆಯ 61 ವರ್ಷದ ವೃದ್ಧ, ಕೋಡಿಹಳ್ಳಿಯ 32 ವರ್ಷದ ಯುವಕ ಮೃತಪಟ್ಟವರು.

ದಾವಣಗೆರೆ ತಾಲ್ಲೂಕಿನಲ್ಲಿ 278, ಹರಿಹರ ತಾಲ್ಲೂಕಿನಲ್ಲಿ 78, ಚನ್ನಗಿರಿ ತಾಲ್ಲೂಕಿನಲ್ಲಿ 117, ಹೊನ್ನಾಳಿ ತಾಲ್ಲೂಕಿನ 63, ಜಗಳೂರು ತಾಲ್ಲೂಕಿನಲ್ಲಿ 15 ಮಂದಿಗೆ ಕೊರೊನಾ ಬಂದಿದೆ.

ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 8 ಮಂದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT