ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಾಯದಿಂದ ವಸತಿ ಶಾಲೆಗೆ ಸೇರ್ಪಡೆ: ವಿದ್ಯಾರ್ಥಿ ಆತ್ಮಹತ್ಯೆ

Last Updated 24 ಆಗಸ್ಟ್ 2022, 4:49 IST
ಅಕ್ಷರ ಗಾತ್ರ

ಜಗಳೂರು: ವಸತಿ ಶಾಲೆಯಲ್ಲಿ ಇರಲು ಆಸಕ್ತಿ ಇಲ್ಲದ ತಾಲೂಕಿನ ಮೆದಗಿನಕೆರೆ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಎಸ್.ಸುನೀಲ್(12) ಶಾಲೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಾಲ್ಲೂಕಿನ ಸಾಗಲಗಟ್ಟೆ ಗ್ರಾಮದ ಸುರೇಶ್ ಹಾಗೂ ಕವಿತಾ ಅವರ ಪುತ್ರ ಸುನೀಲ್ ವಸತಿ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ.

ಅನಾರೋಗ್ಯದ ಕಾರಣದಿಂದ ಒಂದು ವಾರದ ಹಿಂದೆ ಪೋಷಕರು ಸುನೀಲ್ ನನ್ನು ಸಾಗಲಕಟ್ಟೆ ಗ್ರಾಮಕ್ಕೆ ಕರೆದೊಯ್ದಿದ್ದರು. ಚೇತರಿಸಿಕೊಂಡ ಬಳಿಕ ಪೋಷಕರು ವಿದ್ಯಾರ್ಥಿಯನ್ನು ಸೋಮವಾರ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ಮಂಗಳವಾರ ಸಂಜೆ ಪೋಷಕರಿಗೆ ಕರೆ ಮಾಡಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದ. ನಾಳೆ ಬರುತ್ತೇನೆ ಎಂದು ಪೋಷಕರು ಹೇಳಿದ್ದಾರೆ. ಆದರೆ ಪೋಷಕರು ಬಾರದೇ ಇದ್ದುದ್ದರಿಂದ ಮನನೊಂದು ಶೌಚಾಲಯಕ್ಕೆ ತೆರಳಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಾಂಶುಪಾಲರಾದ ಜಿ.ಎನ್. ರೂಪಕಲಾ ಅವರು ಶೌಚಾಲಯದಲ್ಲಿ ನೇಣು ಹಾಕಿಕೊಂಡು ನರಳುತ್ತಿದ್ದವಿದ್ಯಾರ್ಥಿಯನ್ನು ತಮ್ಮ ಕಾರಿನಲ್ಲಿ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್.ಪಿ. ರಿಷ್ಯಂತ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಡಿ.ರೇಷ್ಮಾಕೌಸರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಸಿಪಿಐ ಸತ್ಯನಾರಾಯಣ, ತಹಶೀಲ್ದಾರ್ ಜಿ.ಸಂತೋಷ್ ಕುಮಾರ್, ಜಗಳೂರು ಪಿಎಸ್ಐ ಮಹೇಶ ಹೊಸಪೇಟೆ, ಪ್ರಾಂಶುಪಾಲರಾದರೂಪಕಲಾ ಮಧ್ಯರಾತ್ರಿವರೆಗೆ ಹಾಜರಿದ್ದು,ಮರಣೋತ್ತರ ಪರೀಕ್ಷೆಯಶವವನ್ನು ಪೋಷಕರಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT