ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಬಸ್‌ಗಳು: ಪ್ರಯಾಣಿಕರ ಪರದಾಟ

Published 22 ನವೆಂಬರ್ 2023, 5:02 IST
Last Updated 22 ನವೆಂಬರ್ 2023, 5:02 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆಯಿಂದ –ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬಾರದೇ ಇದ್ದುದರಿಂದ ಸೋಮವಾರ ರಾತ್ರಿ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

ಸೋಮವಾರ ರಾತ್ರಿ 12.30ರಿಂದ 2 ಗಂಟೆಯ ತನಕ ಬೆಂಗಳೂರಿಗೆ ಯಾವುದೇ ಬಸ್‌ಗಳು ಬಂದಿಲ್ಲ. ಇದರಿಂದಾಗಿ ಬೆಂಗಳೂರಿಗೆ ತೆರಳಬೇಕಿದ್ದ ಹಲವು ಮಹಿಳೆಯರು, ಮಕ್ಕಳು ಸೇರಿದಮತೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಬಸ್‌ ಸೌಲಭ್ಯ ಬೇಕು ಎಂದು ಕೆಲಕಾಲ ವಾಗ್ವಾದ ನಡೆಸಿದರು.

ರಾಜ್ಯದ ಮಧ್ಯಭಾಗವಾಗಿರುವ ದಾವಣಗೆರೆ ಹಲವು ಭಾಗಗಳಿಂದ ಪ್ರಯಾಣಿಕರು ಬರುತ್ತಾರೆ. ರಾತ್ರಿ ವೇಳೆ ಬಸ್‌ಗಳು ಇಲ್ಲದೇ ಪರದಾಡುವಂತಾಯಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

‘ದಾವಣಗೆರೆಯಿಂದ ಬೆಂಗಳೂರಿಗೆ ಹೋಗಲು ಕೊನೆಯ ಟ್ರಿಪ್ 11.30ಕ್ಕೆ ಇದೆ. ಆ ನಂತರ ಬರುವ ಪ್ರಯಾಣಿಕರು ಉತ್ತರ ಕರ್ನಾಟಕ ಭಾಗಗಳಿಂದ ಸಾಕಷ್ಟು ಸಂಖ್ಯೆಯ ಬಸ್‌ಗಳು ಬರುತ್ತವೆ. ಆದರೆ ಸೋಮವಾರ ಯಾವ ಕಾರಣಕ್ಕೆ ಸಮಸ್ಯೆಯಾಯಿತು ಎಂಬುದು ತಿಳಿದಿಲ್ಲ. ಬಳಿಕ ಒಂದು ಬಸ್‌ ಅನ್ನು ಕಳುಹಿಸಲಾಯಿತು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಈ. ಶ್ರೀನಿವಾಸಮೂರ್ತಿ ತಿಳಿಸಿದರು.

‘ಬಸ್‌ಗಳ ಕೊರತೆ ಇರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಆದರೆ ನಾವು ಇರುವಷ್ಟು ಸಂಖ್ಯೆಯ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಬಿಎಂಟಿಸಿಯಿಂದ ದಾವಣಗೆರೆಗೆ 9 ಬಸ್‌ಗಳು ಬಂದಿದ್ದು, ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್‌ಗಳು ದಾವಣಗೆರೆ ಡಿಪೊಗೆ ಬರಲಿವೆ’ ಎಂದರು.

ಸಮಸ್ಯೆ ಏನು:

‘ಉತ್ತರ ಕರ್ನಾಟಕದ ಭಾಗಗಳಿಂದ ಬರುವ ಬಸ್‌ಗಳು ರಾತ್ರಿ ಊಟಕ್ಕೆ ನಿಲ್ಲಿಸಿ ಎಲ್ಲಾ ಬಸ್‌ಗಳು ಒಮ್ಮೆಲೆ ಒಂದೇ ಬರುವುದರಿಂದ ದಾವಣಗೆರೆಗೆ ರಾತ್ರಿ 2ಗಂಟೆಯ ನಂತರ ದಾವಣಗೆರೆಗೆ ಬರುತ್ತವೆ. ಮಧ್ಯದ ಅವಧಿಯಲ್ಲಿ ಬಸ್‌ಗಳು ಬಾರದೇ ಇರುವುದರಿಂದ ಸಮಸ್ಯೆಯಾಗುತ್ತದೆ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT