ಮಂಗಳವಾರ, ಜೂನ್ 28, 2022
28 °C

ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿಯಾಗಿ ಆವರಗೆರೆ ಚಂದ್ರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ನೂತನ ಕಾರ್ಯದರ್ಶಿಯಾಗಿ ಆವರಗೆರೆ ಚಂದ್ರು ಆಯ್ಕೆಯಾಗಿದ್ದಾರೆ ಎಂದು ಸಿಪಿಐ ಹಿರಿಯ ಮುಖಂಡ ಆನಂದ ರಾಜ್ ತಿಳಿಸಿದ್ದಾರೆ.

ಈಚೆಗೆ ನಡೆದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆಯಿತು. ಗುರುವಾರ ನಗರದ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆವರಗೆರೆ ಚಂದ್ರು ಅವರಿಗೆ ಪಕ್ಷದ ಬಾವುಟ ನೀಡುವುದರ ಮೂಲಕ ಜವಾಬ್ದಾರಿ ವಹಿಸಲಾಯಿತು.

ಆನಂದರಾಜ್, ಎಚ್.ಜಿ ಉಮೇಶ್, ಪಿ ಷಣ್ಮುಖ ಸ್ವಾಮಿ, ಐರಣಿ ಚಂದ್ರು, ಟಿ.ಎಸ್. ನಾಗರಾಜ್, ಪಿ.ಲಕ್ಷ್ಮಣ, ಎನ್ ಎಚ್. ರಾಮಣ್ಣ ಮಾತನಾಡಿದರು.

ಕೆ.ಜಿ. ಶಿವಮೂರ್ತಿ, ಜಿ. ಯಲ್ಲಪ್ಪ, ಸರೋಜಾ, ಎನ್.ಟಿ. ಬಸವರಾಜ್, ಕೆ. ಬಾನಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು