ಬುಧವಾರ, ಆಗಸ್ಟ್ 10, 2022
24 °C

₹18 ಲಕ್ಷ ಮೌಲ್ಯದ ಸಿಗರೇಟ್ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ತರಳಬಾಳು ಬಡಾವಣೆಯ ಬಾಲಾಜಿ ಏಜೆನ್ಸಿಯ ಬಾಗಿಲು ಮುರಿದ ಕಳ್ಳರು, ಐಟಿಸಿ ಕಂಪನಿಯ ₹18 ಲಕ್ಷ ಮೌಲ್ಯದ ಸಿಗರೇಟ್ ಕಳವು ಮಾಡಿದ್ದಾರೆ.

ಸಿಗರೇಟ್, ಬಿಸ್ಕತ್‌ ಮೊದಲಾದ ಸರಕುಗಳು ಸೋಮವಾರ ಏಜೆನ್ಸಿಗೆ ಬಂದಿದ್ದವು. ಆ ಪೈಕಿ ಕೆಲವು ಸರಕುಗಳನ್ನು ಮಾರಾಟ ಮಾಡಿ ಎಂದಿನಂತೆ ಸಂಜೆ ಮಳಿಗೆಗೆ ಬೀಗ ಹಾಕಿ ಹೋಗಲಾಗಿತ್ತು. ಮಂಗಳವಾರ ಬೆಳಿಗ್ಗೆ ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.

‘ಬಾಗಿಲು ಮುರಿದು 12 ಸಿಗರೇಟ್ ಬಾಕ್ಸ್‌ಗಳು ಹಾಗೂ ಮಳಿಗೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿ.ವಿ.ಆರ್‌ ಅನ್ನು ಕಿತ್ತುಕೊಂಡು ಹೋಗಿದ್ದಾರೆ’ ಎಂದು ಐಟಿಸಿ ಕಂಪನಿ ವಿತರಕ ಸಂತೋಷ್‌ಕುಮಾರ್ ಅವರು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು