ಮಂಗಳವಾರ, ಜೂನ್ 15, 2021
23 °C

ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರೈತ ವಿರೋಧಿ ಭೂಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕು ಗೂ ಕೊರೊನ ನಿಯಂತ್ರಣದಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಗುರುವಾರ ಪ್ರತಿಭಟನೆ ನಡೆಸಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಲೀಗಲ್‌ಸೆಲ್ ಅಧ್ಯಕ್ಷ ಪ್ರಕಾಶ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್.ಓಬಳಪ್ಪ ಮಾತನಾಡಿ, ‘ಜನರ ಕೊರೊನಾಕ್ಕೆ ಸಿಲುಕು ನಲುಗುತ್ತಿದ್ದರೆ ಸರ್ಕಾರವು ಈ ವಿಷಯದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ₹ 4 ಲಕ್ಷ ಮೌಲ್ಯದ ವೆಂಟಿಲೇಟರ್‌ಗೆ ₹ 18 ಲಕ್ಷ ನೀಡಿದೆ. ಪಿಪಿಇ ಕಿಟ್‌ ಸಹಿತ ಎಲ್ಲದರಲ್ಲಿಯೂ ಅವ್ಯವಹಾರ ನಡೆಸಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬಿಡಿ ಪ್ರವೇಶ ಕೂಡ ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ನಾಯಕರಾದ ದೇವರಮನಿ ಶಿವಕುಮಾರ್, ಜಿ.ಎಸ್.ಮಂಜುನಾಥ್, ಜೆ.ಎನ್.ಶ್ರೀನಿವಾಸ್, ಸೈಯದ್ ಚಾರ್ಲಿ, ಕೆ.ಚಮನ್‌ಸಾಬ್,  ಶಿವಲೀಲಾ ಕೊಟ್ರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್,  ಹರೀಶ್ ಕೆ.ಎಲ್. ಬಸಾಪುರ, ಬಾತಿ ಶಿವಕುಮಾರ್, ಪ್ರವೀಣ್‌ಕುಮಾರ್, ಚನ್ನಬಸಪ್ಪ, ಬಸವನಾಳ್ ಹಾಲೇಶ್, ಮಹ್ಮದ್ ಜಿಕ್ರಿಯಾ, ಸುರೇಶ್, ಅವಿನಾಶ್, ಶಂಕರ್, ಅಣಜಿ ಅಂಜಿನಪ್ಪ, ರಂಗನಾಥಸ್ವಾಮಿ, ಜಿ.ರಾಕೇಶ್, ಯುವರಾಜ್, ದಾದಾಪೀರ್, ಮಹಿಳಾ ಘಟಕದ ಸುಷ್ಮಾ ಪಾಟೀಲ್, ಆಶಾರಾಣಿ ಮುರುಳಿ, ದ್ರಾಕ್ಷಾಯಣಮ್ಮ, ಮಂಜುಳಾ, ರಾಜೇಶ್ವರಿ, ಗೀತಾ ಚಂದ್ರಶೇಖರ್, ವಿಜಯಲಕ್ಮ್ಮೀ ಉದಯ್,ಉಮಾ ಕುಮಾರ್, ಕವಿತಾ, ಭಾಗ್ಯ, ದಿಲ್ ಷಾ, ಸಂಗಮ್ಮ, ಜಯಶ್ರೀ, ಸೈಯದ್ ಖಾಲಿದ್, ಹರೀಶ್ ಕೆಂಗಲಹಳ್ಳಿ, ಇಬ್ರಾಹೀಂ ಖಲೀಲ್, ಮೈನುದ್ದೀನ್, ಸದ್ದಾಂ, ರಾಘು ದೊಡ್ಡಮನಿ, ರಾಘವೇಂದ್ರ ಗೌಡ, ಲಿಯಾಕತ್ ಅಲಿ, ಆರೋಗ್ಯಸ್ವಾಮಿ ಆನೆಕೊಂಡ ಲಿಂಗರಾಜ್ ಉಪಸ್ಥಿತರಿದ್ದರು.ಗ್ರೆಸ್ ಸಮಿತಿ ಒತ್ತಾಯಿಸುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು