ಶನಿವಾರ, ಆಗಸ್ಟ್ 20, 2022
21 °C
27 ಹಿರಿಯರು, 19 ಮಕ್ಕಳು ಸೇರಿ 173 ಮಂದಿ ಗುಣಮುಖರಾಗಿ ಬಿಡುಗಡೆ

ದಾವಣಗೆರೆ: 199 ಮಂದಿಗೆ ಕೊರೊನಾ, ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ 97 ವರ್ಷದ ವೃದ್ಧ ಸೇರಿ 199 ಮಂದಿಗೆ ಕೊರೊನಾ ಇರುವುದು ಸೋಮವಾರ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಬಂಬೂಬಜಾರಿನ 30 ವರ್ಷದ ಯುವಕ ಮೂತ್ರಪಿಂಡ ಸಮಸ್ಯೆ ಮತ್ತು ಉಸಿರಾಟದ ತೊಂದರೆಯಿಂದ ಅಸುನೀಗಿದರು. ದೇವರಾಜ ಅರಸು ಬಡಾವಣೆಯ 64 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಮತ್ತು ಮಧುಮೇಹದಿಂದ ನಿಧನರಾದರು. ಹರಿಹರ ಎ.ಕೆ. ಕಾಲೊನಿಯ 55 ವರ್ಷದ ಪುರುಷ ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು.

31 ವೃದ್ಧರಿಗೆ, 12 ವೃದ್ಧೆಯರಿಗೆ, 11 ಬಾಲಕರಿಗೆ, 12 ಬಾಲಕಿಯರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ದಾವಣಗೆರೆ ತಾಲ್ಲೂಕಿನ 96 ಮಂದಿಗೆ ಕೊರೊನಾ ಬಂದಿದೆ. ಆರ್‌ಜಿ ಹಳ್ಳಿ, ಹಾಲವರ್ತಿ, ಬೆಳವನೂರು, ಕುರ್ಕಿ, ಆನಗೋಡು ಮುಂತಾದ ಗ್ರಾಮೀಣ ಪ್ರದೇಶದ 6 ಮಂದಿಗೆ ಸೋಂಕು ಬಂದಿದೆ. 90 ಮಂದಿ ಮಹಾನಗರ ಪಾಲಿಕೆಯ ವ್ಯಾಪ್ತಿಯವರಾಗಿದ್ದಾರೆ.

ಕೆಟಿಜೆ ನಗರ ಪೊಲೀಸ್‌ ಠಾಣೆಯ ಸಿಬ್ಬಂದಿ, ಖಾದಿ ಕೇಂದ್ರದ ಸಿಬ್ಬಂದಿ, ಜೆಜೆಎಂಎಂಸಿ ಒಬ್ಬರು ಸಿಬ್ಬಂದಿಗೂ ಸೋಂಕು ತಗುಲಿದೆ. ಎಸ್‌ಎಸ್‌ ಬಡಾವಣೆ, ನಿಟುವಳ್ಳಿ, ವಿದ್ಯಾನಗರ, ಜಯನಗರ, ಕೆಟಿಜೆ ನಗರ, ಆಂಜನೇಯ ಬಡಾವಣೆ ಮುಂತಾದ ಕಡೆಗಳಲ್ಲಿ 5ಕ್ಕಿಂತ ಅಧಿಕ ಪ್ರಕರಣಗಳು ಕಂಡು ಬಂದಿವೆ.

ಚನ್ನಗಿರಿ ತಾಲ್ಲೂಕಿನಲ್ಲಿ 31, ಹರಿಹರ ತಾಲ್ಲೂಕಿನಲ್ಲಿ 27, ಹೊನ್ನಾಳಿ–ನ್ಯಾಮತಿ ತಾಲ್ಲೂಕಿನಲ್ಲಿ 25, ಜಗಳೂರು ತಾಲ್ಲೂಕಿನಲ್ಲಿ 14 ಮಂದಿಗೆ ಸೋಂಕು ಬಂದಿದೆ. ದಾವಣಗೆರೆಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಹರಪನಹಳ್ಳಿಯ ಇಬ್ಬರು, ಹಾವೇರಿ, ಹಿರೇಕೇರೂರು, ಹೊಳಲ್ಕೆರೆ, ಬಳ್ಳಾರಿಯ ತಲಾ ಒಬ್ಬರು ಸೇರಿ ಜಿಲ್ಲೆಯ ಹೊರಗಿನ 6 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.

15 ವೃದ್ಧರು, 12 ವೃದ್ಧೆಯರು, 11 ಬಾಲಕರು, 8 ಬಾಲಕಿಯರು ಸೇರಿ 173 ಮಂದಿ ಗುಣಮುಖರಾಗಿ ಸೋಮವಾರ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 11,397 ಮಂದಿಗೆ ಕೊರೊನಾ ಬಂದಿದೆ. 8366 ಮಂದಿ ಗುಣಮುಖರಾಗಿದ್ದಾರೆ. 216 ಮಂದಿ ಮೃತಪಟ್ಟಿದ್ದಾರೆ. 2815 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗರಿಕ ಸಹಾಯವಾಣಿ ಕೇಂದ್ರ

ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಗರಿಕ ಸಹಾಯವಾಣಿ (08192 270015) ತೆರೆಯಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ ಐದರ ವರೆಗೆ ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ತುರ್ತು ಚಿಕಿತ್ಸಾ ವಿಭಾಗವನ್ನು (08192 259610)ತೆರೆಯಲಾಗಿದ್ದು, ರಾತ್ರಿ 8ರಿಂದ ಬೆಳಿಗ್ಗೆ 8ರ ವರೆಗೆ ಸಂಪರ್ಕಿಸಬಹುದು.

ವಸಂತ ಕುಮಾರ್‌ (9743212323), ನರೇಶ್‌ (7975931223) ಜನರಲ್‌ ಶಿಫ್ಟ್‌ನಲ್ಲಿ (ಬೆಳಿಗ್ಗೆ 9ರಿಂದ ಸಂಜೆ 5) ಇರುತ್ತಾರೆ.

ಸುಧಾ ಎಸ್‌. (8884375814), ದಾದಾಪೀರ್‌ ಎಂ.ಎಸ್‌. (8095786085), ಗೋಪಾಲಪ್ಪ (9880037134), ನಾಗರಾಜ (9620004492) ರೊಟೇಶನ್‌ನಲ್ಲಿ ದಿನದ 24 ಗಂಟೆ ಇರುತ್ತಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಪ್ಪ ಕೋವಿಡ್ ಗೆ ಬಲಿ

ಜಗಳೂರು: ಡಿಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಸೂರಡ್ಡಿಹಳ್ಳಿ ಶರಣಪ್ಪ (65) ಕೊರೊನಾ ಸೋಂಕಿನಿಂದ ಭಾನುವಾರ ಮೃತಪಟ್ಟಿದ್ದಾರೆ.

ಕೊರೊನ ಸೋಂಕಿನಿಂದ ಬಳಲುತ್ತಿದ್ದ ಶರಣಪ್ಪ ಅವರು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ವಾರದ ಹಿಂದೆ ಚಿಕಿತ್ಸೆಗೆ ದಾಖಲಾಗಿದ್ದರು. ಭಾನುವಾರ ತೀವ್ರ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.

24 ತಾಸಿನಲ್ಲಿ ಪಟ್ಟಣದ ಕಿರಾಣಿ ವರ್ತಕರಾದ ಚಂದ್ರಣ್ಣಶೆಟ್ಟಿ (65) ಹಾಗೂ ಬೀಜ, ಗೊಬ್ಬರ ಮಾರಾಟಗಾರ ಸತೀಶ್ (58) ಸೇರಿ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು