ಬುಧವಾರ, ಮಾರ್ಚ್ 29, 2023
30 °C

ಕೋವಿಡ್‍ ನಿಯಮ ಉಲ್ಲಂಘನೆ: ಶಾಸಕರ ಪುತ್ರನ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಶಾಸಕ ಎಸ್‍. ರಾಮಪ್ಪ ಅವರ ಮಗಳ ಮದುವೆಯಲ್ಲಿ ಕೋವಿಡ್‍ ನಿಯಮ ಉಲ್ಲಂಘಿಸಿರುವ ಆರೋಪದ ಮೇಲೆ ಶಾಸಕರ ಪುತ್ರ ಹಾಗೂ ಕಲ್ಯಾಣ ಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗಿದೆ.

ಮದುವೆ ಕಾರ್ಯಕ್ರಮದಲ್ಲಿ ಸರ್ಕಾರ ವಿಧಿಸಿರುವ ಕೋವಿಡ್‍ಗಳನ್ನು ಉಲ್ಲಂಘಸಿಲಾಗಿದೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರಸಭೆಯಿಂದ ಶಾಸಕರ ಪುತ್ರ ಯತೀರಾಜ್‍ ಅವರಿಗೆ ₹ 10 ಸಾವಿರ, ಕಲ್ಯಾಣ ಮಂಟಪದ ಮಾಲೀಕ ಅರುಣ್ ಕುಮಾರ್‍ ಅವರಿಗೆ ₹ 5 ಸಾವಿರ ದಂಡ ವಿಧಿಸಿ ಎಚ್ಚರಿಕೆ ನೋಟಿಸ್‍ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.