ಸೋಮವಾರ, ಫೆಬ್ರವರಿ 17, 2020
15 °C

ಬೆಳೆ ವಿಮೆ ಸಮೀಕ್ಷೆಯಲ್ಲಿ ಲೋಪ: ಗ್ರಾಮ ಲೆಕ್ಕಿಗ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೆಳೆ ವಿಮೆ ಸಮೀಕ್ಷೆಯಲ್ಲಿ ಲೋಪವೆಸಗಿದ ನ್ಯಾಮತಿ ತಾಲ್ಲೂಕಿನ ಕುಂಕುವಾ ವೃತ್ತದ ಗ್ರಾಮ ಲೆಕ್ಕಿಗ ಪ್ರಶಾಂತ ಕುಮಾರ್ ಎಂ.ಎಸ್. ಅವರನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೋಮವಾರ ಅಮಾನತುಗೊಳಿಸಿದ್ದಾರೆ.

ತಾಲ್ಲೂಕಿನ ಕೂಗುನಹಳ್ಳಿ ಗ್ರಾಮದ ರೈತ ಚಂದ್ರಶೇಖರಪ್ಪ ಹಾಗೂ ರತ್ನಮ್ಮ ಅವರ ಜಮೀನುಗಳನ್ನು ತಪ್ಪಾಗಿ ನಮೂದಿಸಿದ್ದು, ಬೆಳೆ ಸಮೀಕ್ಷೆ ವೇಳೆ ಮೆಕ್ಕೆಜೋಳದ ಬದಲು ಅಡಿಕೆಯನ್ನು ನಮೂದಿಸಿದ್ದಾರೆ ಎಂದು ರೈತರು ದೂರು ನೀಡಿದ್ದರು. ಈ ಕುರಿತು ಹೊನ್ನಾಳಿ ಕೃಷಿ ಉಪ ನಿರ್ದೇಶಕ ಅವರು ಪರಿಶೀಲನೆ ನಡೆಸಿದ್ದರು.

ರೈತನ ಮನವಿಯ ಮೇರೆಗೆ ಬೆಳೆಯನ್ನು ನಮೂದು ಮಾಡಲಾಗಿದೆ ಎಂದು ಪ್ರಶಾಂತ ಕುಮಾರ್ ಮಾಹಿತಿ ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ವರದಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸರ್ಕಾರದ ಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು