ಬುಧವಾರ, ಜೂಲೈ 8, 2020
28 °C

ದಾವಣಗೆರೆ: ಮತ್ತೆ 6 ಮಂದಿಗೆ ಕೊರೊನಾ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಸೇರಿ 6 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಆನೆಕೊಂಡ ಕಂಟೈನ್‌ಮೆಂಟ್‌ ಸಂಪರ್ಕದಿಂದ 33 ವರ್ಷದ ಯುವಕನಿಗೆ (ಪಿ.4836) ಸೋಂಕು ತಗುಲಿದೆ. ಇಡಬ್ಲ್ಯುಎಸ್‌ ಕಾಲೊನಿಯ 64 ವರ್ಷದ ವೃದ್ಧರಿಗೆ (ಪಿ.4837) ಜಾಲಿನಗರದ 23 ವರ್ಷದ ಯುವಕನ (ಪಿ.3862) ಸಂಪರ್ಕದಿಂದ ಸೋಂಕು ಬಂದಿದೆ. 36 ವರ್ಷದ ಮತ್ತು 60 ವರ್ಷದ ಮಹಿಳೆಯರಿಗೆ (ಪಿ.4838, ಪಿ. 4839) ಜಾಲಿನಗರದ 73 ವರ್ಷದ ಮಹಿಳೆಯ (ಪಿ.2417) ಸಂಪರ್ಕದಿಂದ ಕೊರೊನಾ ಬಂದಿದೆ. 35 ವರ್ಷದ ಮತ್ತು 42 ವರ್ಷದ ಮಹಿಳೆಯರಿಗೆ (ಪಿ. 4840, ಪಿ. 4841) ಜಾಲಿನಗರದ 68 ವರ್ಷದ ಮಹಿಳೆಯ ಸಂಪರ್ಕದಿಂದ ವೈರಸ್‌ ಬಂದಿದೆ.

ಇದನ್ನೂ ಓದಿ: 

ಜಿಲ್ಲೆಯಲ್ಲಿ ಈವರೆಗೆ 186 ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ಇಬ್ಬರು ಬಿಡುಗಡೆಗೊಂಡವರೂ ಸೇರಿ ಒಟ್ಟು  149 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು