ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಗಾಜಿನಮನೆಯಲ್ಲಿ ಏರ್ಪಡಿಸಿದ್ದ 5 ದಿನಗಳ ಫಲಪುಷ್ಪ ಪ್ರದರ್ಶನವನ್ನು 20,000ಕ್ಕೂ ಅಧಿಕ ಜನರು ಕಣ್ತುಂಬಿಕೊಂಡಿದ್ದಾರೆ.

ಫೆ.25ರಿಂದ ಮಾರ್ಚ್ 1ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಿತು. 15,000 ವಯಸ್ಕರು ಹಾಗೂ 5,000 ಮಕ್ಕಳು ಟಿಕೆಟ್ ಖರೀದಿಸಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ. ವಯಸ್ಕರಿಗೆ ₹ 30 ಹಾಗೂ ಮಕ್ಕಳಿಗೆ ₹ 10 ಟಿಕೆಟ್ ನಿಗದಿಪಡಿಸಲಾಗಿತ್ತು.

ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನವನ್ನು ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರುವರಿಗೆ ಮುಂದೂಡಲಾಗಿತ್ತು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿಯೇ ರಂಜಾನ್ ಮಾಸ ಆರಂಭವಾಗಿದ್ದರಿಂದ ನಿರೀಕ್ಷೆಯಷ್ಟು ಜನರು ಗಾಜಿನಮನೆಗೆ ಭೇಟಿ ನೀಡಲಿಲ್ಲ.

‘ಆರಂಭದ ಎರಡು ದಿನ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನ ಬರಲಿಲ್ಲ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಹೆಚ್ಚು ಜನರು ಭೇಟಿ ನೀಡಿದರು. ಕಳೆದ ಬಾರಿಗಿಂತ ಕಡಿಮೆ ಜನರು ಗಾಜಿನಮನೆಗೆ ಭೇಟಿ ನೀಡಿದ್ದಾರೆ. ರಂಜಾನ್ ಮಾಸ ಆರಂಭವಾಗಿದ್ದರಿಂದ ನಿರೀಕ್ಷೆಯಷ್ಟು ಸ್ಪಂದನೆ ಸಿಗಲಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಜಿ.ಸಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.