ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಮತಿ | ಸಾಲದ ಹೊರೆ: ಮಹಿಳೆ ಆತ್ಮಹತ್ಯೆ

Published 23 ಜೂನ್ 2024, 15:51 IST
Last Updated 23 ಜೂನ್ 2024, 15:51 IST
ಅಕ್ಷರ ಗಾತ್ರ

ನ್ಯಾಮತಿ: ತಾಲ್ಲೂಕಿನ ಕುರುವ ತಾಂಡಾದಲ್ಲಿ ಶನಿವಾರ ಸಾಲದ ಹೊರೆಯಿಂದ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಮಲಾಬಾಯಿ (50) ಆತ್ಮಹತ್ಯೆ ಮಾಡಿಕೊಂಡವರು.

ಅವರಿಗೆ ಒಡೆಯರಹತ್ತೂರಿನಲ್ಲಿ 2 ಎಕರೆ ಜಮೀನು ಇದೆ. ಒಂದು ವರ್ಷದ ಹಿಂದೆ ಅಡಿಕೆ ತೋಟ ಮಾಡಿದ್ದರು. ಬೆಳೆ ಬೆಳೆಯಲು ಹಾಗೂ ಮಗಳ ಮದುವೆಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹ 50,000 ಹಾಗೂ ವೈಯಕ್ತಿಕವಾಗಿ ₹ 5.40 ಲಕ್ಷ ಸಾಲ ಮಾಡಿದ್ದರು.

‘ಸಮರ್ಪಕ ಮಳೆಯಾಗದ ಕಾರಣ ಫಸಲು ಬಂದಿರಲಿಲ್ಲ. ಇದರಿಂದ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕಮಲಾಬಾಯಿ ಪುತ್ರ ದೂರು ನೀಡಿದ್ದಾರೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT