ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ ಹೂಡಿಕೆ ಹೆಸರಿನಲ್ಲಿ ಒಟ್ಟು ₹13.8 ಲಕ್ಷ ಕಳೆದುಕೊಂಡಿದ್ದಾರೆ.

ಜನವರಿ 1ರಂದು ಮೊಬೈಲ್ನಲ್ಲಿ ಫೇಸ್ಬುಕ್ ವೀಕ್ಷಿಸುತ್ತಿದ್ದಾಗ ಬಂದ ಆನ್ಲೈನ್ ಹೂಡಿಕೆ ಜಾಹೀರಾತು ಗಮನಿಸಿದ ಅವರು, ಅದನ್ನು ಕ್ಲಿಕ್ ಮಾಡಿದ್ದರು. ರಿಯಾ ಕಪೂರ್ ಎಂಬವರು ಇವರ ಜತೆ ಸಂವಹನ ನಡೆಸಿದ್ದರು. ಅಡ್ವೆಂಟ್ ಸ್ಟಾಕ್ ಬ್ರೋಕಿಂಗ್ ಪ್ರೈ. ಲಿ. ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂಬುದಾಗಿ ಆಸೆ ಹುಟ್ಟಿಸಿದ್ದರು.

ಆನ್ಲೈನ್ನಲ್ಲಿ ವಂಚಕರು ತಿಳಿಸಿದ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿದರು. ನಂತರ ಅಲ್ಲಿನ ಲಿಂಕ್ ಬಳಸಿಕೊಂಡು ಎಡಿವಿಪಿಎಂಎ ಹೆಸರಿನ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಲು ಶುರು ಮಾಡಿದರು. ಅವರು ನೀಡಿದ್ದ ಬ್ಯಾಂಕ್ ಖಾತೆಯೊಂದಕ್ಕೆ ಹಂತ ಹಂತವಾಗಿ ಹಣ ಪಾವತಿಸಲು ಶುರು ಮಾಡಿದರು. ತಮ್ಮಲ್ಲಿದ್ದ ಉಳಿತಾಯ ಹಾಗೂ ಸ್ನೇಹಿತರಿಂದ ಸಾಲ ಪಡೆದು ಹೂಡಿಕೆ ಮಾಡಿದ್ದರು. ಪತ್ನಿ ಹಾಗೂ ಸ್ನೇಹಿತನ ಖಾತೆಯಿಂದಲೂ ಹಣ ವರ್ಗಾಯಿಸಿದ್ದರು.

ಹೂಡಿಕೆಯಿಂದ ಒಟ್ಟು ₹68 ಲಕ್ಷ ಲಾಭ ಬಂದಿರುವುದಾಗಿ ಆ್ಯಪ್ನಲ್ಲಿ ನಮೂದಾಗಿತ್ತು. ಆದರೆ ಅದನ್ನು ವಿತ್ಡ್ರಾ ಮಾಡಬೇಕಾದರೆ ₹8.8 ಲಕ್ಷ ಕಮಿಷನ್ ಪಾವತಿಸುವಂತೆ ಸೂಚಿಸಲಾಗಿತ್ತು. ಇದಾದ ನಂತರ ಆ್ಯಪ್ ಡಿಲಿಟ್ ಆಗಿತ್ತು. ತಾವು ಮೋಸ ಹೋಗಿರುವುದು ಗೊತ್ತಾದ ಅವರು ನಗರದ ಸೆನ್ ಅಪರಾಧ ಠಾಣೆಗೆ ಶುಕ್ರವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.