ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಹೊಸಕುಂದವಾಡದಲ್ಲಿ ಒಂದೇ ದಿನ ಏಳು ಜನರ ಸಾವು

Published 11 ಜುಲೈ 2024, 6:16 IST
Last Updated 11 ಜುಲೈ 2024, 6:16 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಹೊಸಕುಂದವಾಡದಲ್ಲಿ ಗುರುವಾರ ಒಂದೇ ದಿನ ಏಳು ಜನರು ಪ್ರತ್ಯೇಕವಾಗಿ ಮೃತಪಟ್ಟಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇಬ್ಬರು ವಯೋಸಹಜ, ಇಬ್ಬರು ವಾಂತಿಬೇಧಿ ಹಾಗೂ ಮೂವರು ಇತರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದ ಮಾರಜ್ಜಿ (60) ಹಾಗೂ ಶಾಂತಮ್ಮ (65) ವಯೋಸಹಜವಾಗಿ, ಸಂತೋಷ್ (32), ಭೀಮಕ್ಕ (60) ವಾಂತಿ ಭೇದಿಯಿಂದ, ಈರಮ್ಮ (65) ಹಾಗೂ ಸುನೀಲ್ (25) ಜ್ವರದಿಂದ ಮತ್ತು ಮೂರು ದಿನಗಳ ಶಿಶು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದೇ ದಿನ ಏಳು ಜನರು ಮೃತಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಮೃತರ ಅಂತ್ಯಕ್ರಿಯೆಗೂ ಸ್ಥಳಾವಕಾಶದ ಕೊರತೆ ಎದುರಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT