ದಾವಣಗೆರೆಯ ನಿಟುವಳ್ಳಿಯಲ್ಲಿನ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಯಂಸೇವಾ ಸಂಸ್ಥೆಯೊಂದು ಲೇಖನ ಸಾಮಗ್ರಿ ವಿತರಿಸಿರುವುದು
ಕಲಿತ ಶಾಲೆಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು ಕಾಳಜಿ ತೋರಿದ್ದಾರೆ. ದಾವಣಗೆರೆಯು ದಾನಕ್ಕೆ ಹೆಸರಾಗಿದ್ದು ಶೈಕ್ಷಣಿಕ ಪ್ರಗತಿಗೆ ಇಲ್ಲಿನ ಜನರು ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನೆರವು ನೀಡಲು ಬಯಸುವ ದಾನಿಗಳು ನೇರವಾಗಿ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬಹುದು
ಜಿ.ಕೊಟ್ರೇಶ್ ಡಿಡಿಪಿಐ
2024-25ನೇ ಸಾಲಿನಲ್ಲಿ ಬ್ಯಾಂಕ್‌ಗಳು ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇನ್ನಿತರ ದಾನಿಗಳಿಂದ ₹3 ಲಕ್ಷ ಮೌಲ್ಯದ ಪೀಠೋಪಕರಣಗಳನ್ನು ಶಾಲೆಗೆ ದೇಣಿಗೆ ರೂಪದಲ್ಲಿ ಪಡೆಯಲಾಗಿದೆ. ಡೆಸ್ಕ್ ಬೆಂಚ್ ನಲಿ ಕಲಿ ಪೀಠೋಪಕರಣ ಸೌಂಡ್ ಸಿಸ್ಟಂ ಬ್ಯಾಂಡ್ ಸೆಟ್ ಸೇರಿ ಹಲವು ಸಾಮಗ್ರಿಗಳನ್ನು ದಾನಿಗಳು ನೀಡಿರುವುದು ಶ್ಲಾಘನೀಯ
ನಾಗವೇಣಿ ಶಿಕ್ಷಕಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶ್ರೀರಾಮ ಬಡಾವಣೆ ನಿಟುವಳ್ಳಿ
2024-25ನೇ ಸಾಲಿನಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ತರಗತಿ ಕೊಠಡಿಗೆ ಸುಣ್ಣಬಣ್ಣ ಬಳಿಸಿದರು. ಒಟ್ಟು ₹1.20 ಲಕ್ಷ ಮೊತ್ತದಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುವ ಮೂಲಕ ನೆರೆಹೊರೆಯ ಗ್ರಾಮಗಳ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ
ಲಕ್ಷ್ಮಿನಾರಾಯಣ ಶಿಕ್ಷಕ ಕೆಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚನ್ನಗಿರಿ