ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಂದ ಹೊರಸೂಸುತ್ತಿರುವ ದಟ್ಟ ಹೊಗೆ
ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ್
ಬೇರೆ ಪ್ರದೇಶಕ್ಕೆ ಹೋಲಿಸಿದರೆ ಮಂಡಕ್ಕಿ ಬಟ್ಟಿ ಸುತ್ತಮುತ್ತಲು ವಾಯುಮಾಲಿನ್ಯ ಜಾಸ್ತಿ ಇದೆ. ಮಂಡಕ್ಕಿ ಬಟ್ಟಿಗಳ ಸ್ಥಳಾಂತರಕ್ಕೆ ಪಾಲಿಕೆಗೆ ಸಲಹೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ
ರಾಜಶೇಖರ ಪುರಾಣಿಕ್ ಪರಿಸರ ಅಧಿಕಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
- ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಅನುದಾನದ ಲಭ್ಯತೆಯನ್ನು ಆಧರಿಸಿ ರಸ್ತೆಯಲ್ಲಿನ ದೂಳನ್ನು ಹೀರುವ ಯಂತ್ರ ಖರೀದಿಸಲಾಗುವುದು
ಸುಬ್ರಹ್ಮಣ್ಯ ಶ್ರೇಷ್ಠಿ ನಗರಸಭೆ ಪೌರಾಯುಕ್ತ ಹರಿಹರ
ಕಾರ್ಗಿಲ್ ಕಾರ್ಖಾನೆಯಿಂದ ದುರ್ವಾಸನೆ ಬರುತ್ತದೆ. ಆಧುನಿಕ ತಂತ್ರಜ್ಞಾನ ಉಪಯೋಗಿಸಿ ದುರ್ವಾಸನೆಯನ್ನು ನಿವಾರಿಸಬಹುದು. ಹೀಗಿದ್ದರೂ ಕಾರ್ಖಾನೆಯವರು ಖರ್ಚು ಮಾಡಲು ಹಿಂದೇಟು ಹಾಕುತ್ತಿದ್ದಾರೆ
ರಮೇಶ್ ಎಂ.ಆರ್. ಬೆಳ್ಳೂಡಿ ಹರಿಹರ
ಹರಿಹರ ಪಾಲಿಫೈಬರ್ಸ್ ಕಾರ್ಖಾನೆಯಿಂದ ಬರುವ ದುರ್ವಾಸನೆಯ ಪ್ರಮಾಣ ಕೆಲವೊಮ್ಮೆ ತೀವ್ರವಾಗಿರುತ್ತದೆ. ಆಗ ಉಸಿರಾಟಕ್ಕೂ ಸಮಸ್ಯೆಯಾಗುತ್ತದೆ
ನಾಗರಾಜ್ ತೇಲ್ಕರ್ ಹರಿಹರ
ಸಕ್ಕರೆ ಕಾರ್ಖಾನೆ ಹೊರ ಸೂಸುವ ದುರ್ವಾಸನೆ ಮತ್ತು ಬೂದಿಯು ಗ್ರಾಮಸ್ಥರ ಬದುಕನ್ನು ನರಕಮಯವಾಗಿಸಿದೆ. ಬೆಳೆಗಳ ಇಳುವರಿ ಕುಸಿದಿದೆ. ಜನರಿಗೆ ಚರ್ಮವ್ಯಾಧಿ ಕಾಡುತ್ತಿದೆ. ಸಂಬಂಧಿಸಿದವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ