ದಾವಣಗೆರೆ: ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಅವರನ್ನು ಕಣಕ್ಕೆ ಇಳಿಸುವುದು ಸೂಕ್ತ ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಹಳ್ಳಿ ನಾಗರಾಜ್ ತಿಳಿಸಿದರು.

‘ಶಾಸಕರಾಗಿ ಕೆಲಸ ಮಾಡಿರುವ ಅನುಭವ ಮಹಿಮ ಪಟೇಲ್ ಅವರಿಗೆ ಇದೆ. ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಪುತ್ರರಾಗಿರುವ ಮಹಿಮ ಅವರು ರಾಜಕಾರಣದಲ್ಲಿ ಪಳಗಿದ್ದಾರೆ. ಸಾತ್ವಿಕ ರಾಜಕಾರಣದ ಕನಸು ಕಟ್ಟಿಕೊಂಡಿರುವ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂಬುದು ಪಕ್ಷದ ಒತ್ತಾಯ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘2013ರಿಂದ ಎನ್ಡಿಎ ಜೊತೆಗಿರುವ ಜೆಡಿಯು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೀಟುಗಳಿಗೆ ಬೇಡಿಕೆ ಇಟ್ಟಿಲ್ಲ. ದಕ್ಷಿಣ ಕ್ಷೇತ್ರ ವಿಶೇಷವಾಗಿದ್ದು, ಜೆಡಿಯು ಅಭ್ಯರ್ಥಿ ಕಣಕ್ಕೆ ಇಳಿದರೆ ಅನುಕೂಲವಾಗಲಿದೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುವಂತೆ ಜೆಡಿಯು ವರಿಷ್ಠ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ಮನವಿ ಮಾಡಲಾಗಿದೆ’ ಎಂದರು.

‘ಹಣ, ಹೆಂಡ ಹಾಗೂ ತೋಳ್ಬಲದ ರಾಜಕಾರಣಕ್ಕೆ ಇತಿಶ್ರೀ ಹಾಡುವ ಅಗತ್ಯವಿದೆ. ಇದು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗಬೇಕು ಎಂಬುದು ಜೆಡಿಯು ಅಪೇಕ್ಷೆ. ಪಕ್ಷದ ಈ ನಿಲುವಿಗೆ ಪ್ರಜಾಕಿಯಾ, ಕೆಆರ್ಎಸ್, ಎಎಪಿ ಸೇರಿದಂತೆ ಇತರ ಪಕ್ಷಗಳು ಸಹಮತ ಸೂಚಿಸಿವೆ. ಎನ್ಡಿಎ ಭಾಗವಾಗಿರುವ ಬಿಜೆಪಿಯು ಕ್ಷೇತ್ರವನ್ನು ಜೆಡಿಯುಗೆ ಬಿಟ್ಟುಕೊಡದೇ ಇದ್ದರೆ ಸ್ವತಂತ್ರವಾಗಿ ಕಣಕ್ಕೆ ಇಳಿಯುವ ಬಗ್ಗೆ ಆಲೋಚಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಜಯಣ್ಣ, ಮುಖಂಡರಾದ ಡಿ.ಆರ್. ಶಿವಯೋಗಿ, ಎಂ.ಡಿ. ನೀಲಗಿರಿಯಪ್ಪ, ಚಂದ್ರಶೇಖರಯ್ಯ, ಶಶಿಭೂಷಣ್ ತಿಪಟೂರು, ಭೀಮಣ್ಣ, ಅಹ್ಮದ್ ಶರೀಫ್, ಕುಮಾರಸ್ವಾಮಿ, ಶ್ರೀನಿವಾಸ್ ಇದ್ದರು.