ದಾವಣಗೆರೆ: ಇಲ್ಲಿನ ಮಹಾನಗರಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳೂ ಬಿಜೆಪಿ ಪಾಲಾಗಿವೆ.
28ನೇ ವಾರ್ಡ್ ಸದಸ್ಯ ಜೆ.ಎನ್. ಶ್ರೀನಿವಾಸ್, 37ನೇ ವಾರ್ಡ್ ಸದಸ್ಯೆ ಶ್ವೇತಾ ಎಸ್. ದಂಪತಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ಉಪಚುನಾವಣೆ ನಡೆದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ದಂಪತಿ ಜಯಗಳಿಸಿದ್ದಾರೆ.
ಜೆ.ಎನ್. ಶ್ರಿನಿವಾಸ್ 2565 ಮತ ಗಳಿಸಿದರೆ ಕಾಂಗ್ರೆಸ್‌ನ ಹುಲ್ಲುಮನಿ ಗಣೇಶ್ 1884 ಮತ ಪಡೆದರು. 681 ಮತಗಳಿಂದ ಶ್ರೀನಿವಾಸ್ ಜಯಗಳಿಸಿದರು.
37ನೇ ವಾರ್ಡ್‌ನಲ್ಲಿ ಶ್ವೇತಾ 2096 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ 1303 ಮತ ಪಡೆದರು. ಶ್ವೇತಾ 793 ಮತಗಳಿಂದ ಜಯಗಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.