ಹರಿಹರ: ಹರಿಹರ ನಗರಸಭೆ ಬಜೆಟ್‌ನಲ್ಲಿ ನಾಗರಿಕರ ಸಂರಕ್ಷಣೆಗಾಗಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ₹1 ಕೋಟಿ ಅನುದಾನ ಮೀಸಲಿಡಲು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಹ್ಯೂಮನ್ ರೈಟ್ಸ್ ಪ್ಯಾನಲ್ ಹರಿಹರ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಫ್ರೀನ್ ಬಾನು ಬಳ್ಳಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಜಿಲ್ಲೆಯ 2ನೇ ದೊಡ್ಡ ನಗರವಾದ ಹರಿಹರದಲ್ಲಿ ಬೈಕ್‌ಗಳ ಕಳ್ಳತನ, ಮನೆ, ಅಂಗಡಿಗಳ ಕಳ್ಳತನ ಗಣನೀಯವಾಗಿ ನಡೆದಿವೆ. ಬ್ಯಾಂಕ್‌ಗಳ ಹೊರಭಾಗದಲ್ಲಿ ಲಕ್ಷಾಂತರ ರೂಪಾಯಿ ನಗದನ್ನು ಕಳ್ಳರು ಅಮಾಯಕರಿಂದ ಎಗರಿಸಿದ್ದಾರೆ. ನಗರದೊಳಗೆ ನಿತ್ಯ 20,000 ಭಾರಿ ವಾಹನಗಳ ಸಂಚಾರವಿದೆ. ಸಿಗ್ನಲ್ ಜಂಪ್, ವಾಹನ ಚಾಲಕರಿಂದ ದುಡುಕಿನ ಚಾಲನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಇದಕ್ಕೆ ಪರಿಹಾರ’ ಎಂದು ವಿಶ್ವ ಕರವೇ ರಾಜ್ಯ ಉಪಾದ್ಯಕ್ಷ ನಾಗರಾಜ್ ಭಂಡಾರಿ ಹೇಳಿದರು.

ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ವಿಶ್ವ ಕರವೇ ತಾಲ್ಲೂಕು ಘಟಕ ಅಧ್ಯಕ್ಷ ರಾಹುಲ್ ಮೆಹರವಾಡೆ, ತಾಲ್ಲೂಕು ಗೌರವಾಧ್ಯಕ್ಷ ಪ್ರವೀಣ್ ಜಿ.ವಿ., ಪದಾಧಿಕಾರಿಗಳಾದ ರಿಷಬ್ ರಾಜ್, ದಾವಣಗೆರೆ ಲಿಂಗರಾಜ್, ಗಣೇಶ್ ಬಿ., ಹರೀಶ್ ಇಂಡಿ, ಉಮೇಶ್ ಎ.ಬಿ., ಪ್ರವೀಣ್ ಕುಮಾರ್, ಪವನ್ ಕುಮಾರ್ ಎಚ್.ಬಿ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.