ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ | ಹೆಚ್ಚುತ್ತಿರುವ ಬಿಸಿಲು: ಮುಂಜಾಗ್ರತೆ ವಹಿಸಲು ಸಲಹೆ

Published 29 ಏಪ್ರಿಲ್ 2024, 15:43 IST
Last Updated 29 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಹರಿಹರ: ಹವಾಮಾನ ಇಲಾಖೆಯು ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಮುನ್ಸೂಚನೆ ನೀಡಿದ್ದು, ಹೆಚ್ಚಿನ ತಾಪಮಾನದ ದುಷ್ಪರಿಣಾಮ ತಪ್ಪಿಸಲು ಜನರು ಇಲಾಖೆ ನೀಡಿರುವ ಸಲಹೆ, ಸೂಚನೆಗಳನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ಗುರುಬಸವರಾಜ್ ಮನವಿ ಮಾಡಿದ್ದಾರೆ.

ಮಧ್ಯಾಹ್ನ 12ರಿಂದ 3ರವರೆಗೆ ಬಿಸಿಲಿನಲ್ಲಿ ಓಡಾಡುವುದು, ಶ್ರಮದಾಯಕ ಕೆಲಸ ಮಾಡುವುದನ್ನು ತಪ್ಪಿಸುವುದು. ದೇಹವನ್ನು ನಿರ್ಜಲೀಕರಣಗೊಳಿಸುವ ಮದ್ಯ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳ ಸೇವನೆ ತ್ಯಜಿಸಬೇಕು.

ಕಾಲಕಾಲಕ್ಕೆ ಸಾಕಷ್ಟು ನೀರು, ನಿಂಬೆ ರಸ, ಮಜ್ಜಿಗೆ, ಒಆರ್‌ಎಸ್ ಸೇವಿಸುವುದು, ಹತ್ತಿ, ಖಾದಿ ಬಟ್ಟೆ, ಓಡಾಡುವಾಗ ತಲೆ ಮೇಲೆ ಟೋಪಿ, ಕೊಡೆ ಬಳಕೆ ಮಾಡುವುದು, ನಿತ್ಯ ತಣ್ಣೀರಿನಿಂದ ಸ್ನಾನ ಮಾಡಬೇಕು. ಬಿಸಿಲಿನ ತಾಪದ ರೋಗಲಕ್ಷಣಗಳು ಕಂಡುಬಂದಲ್ಲಿ, ಅಥವಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರೆ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT