ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರಕ್ಕೆ ದ್ವಾರಕೀಶ್ ನಂಟು

ಮನೆ, ಮನೆ ಕಥೆ ಸಿನಿಮಾ ಶೂಟಿಂಗ್ ನಡೆದಿತ್ತು
Published 17 ಏಪ್ರಿಲ್ 2024, 7:48 IST
Last Updated 17 ಏಪ್ರಿಲ್ 2024, 7:48 IST
ಅಕ್ಷರ ಗಾತ್ರ

ಹರಿಹರ: ನಟ, ನಿರ್ಮಾಪಕ ದ್ವಾರಕೀಶ್ ಅವರಿಗೆ ಹರಿಹರದ ಜೊತೆಗೆ ಗಾಢವಾದ ನಂಟಿತ್ತು. ಅವರ ಪತ್ನಿ ಅಂಬುಜಾ ಅವರ ಇಬ್ಬರು ಚಿಕ್ಕಮ್ಮಂದಿರು ಹರಿಹರದಲ್ಲಿದ್ದರು. ಅವರಲ್ಲಿ ಒಬ್ಬರು ಇಂದಿರಾಬಾಯಿ ಅಣ್ಣಿಗೇರಿ ನರಸಿಂಹ ಮೂರ್ತಿ ಹರಿಹರದ ಜೆ.ಸಿ.ಬಡಾವಣೆ 5ಮೇನ್, 7ನೇ ಕ್ರಾಸ್‌ನಲ್ಲಿ ವಾಸವಿದ್ದರು.

ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು, ಜೊತೆಗೆ 1981ರಲ್ಲಿ ‘ಮನೆ ಮನೆ ಕಥೆ’ ಚಲನಚಿತ್ರದ ಶೂಟಿಂಗ್‌ಗೆ ಏಳೆಂಟು ದಿನ ಹರಿಹರದಲ್ಲೆ ಅವರು ವಾಸ್ತವ್ಯ ಹೂಡಿದ್ದರು.

‘ಮನೆ ಮನೆ ಕಥೆ’ ಸಿನಿಮಾ ತಯಾರಾಗಿದ್ದು ಕಲಾಕ್ರತಿ ಕ್ರಿಯೇಷನ್ಸ್‌ನಿಂದ, ಈ ಸಿನಿಮಾಗೆ ದ್ವಾರಕೀಶ್ ಅವರ ಜೊತೆಗೆ ಭಾರ್ಗವ, ಹರಿಹರದ ಅಂದಿನ ಉದ್ಯಮಿ ದಿ.ಎಂ.ಪಿ.ಕುಮಾರ್ ಸಹ ನಿರ್ಮಾಪಕರಾಗಿದ್ದರು. ಹರಿಹರದ ಆಗಿನ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ ಗೆಸ್ಟ್ ಹೌಸ್, ಅದರ ಮುಂದಿನ ಉದ್ಯಾನ ಹಾಗೂ ದಿ.ಎಂ.ಪಿ.ಕುಮಾರ್ ಅವರ ಮನೆಯಲ್ಲಿ ಈ ಸಿನಿಮಾದ ಶೂಟಿಂಗ್ ಏಳೆಂಟು ದಿನ ನಡೆದಿತ್ತು ಎಂದು ಹರಿಹರ ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ಆರ್.ನಾಯ್ಡು, ಹಾಗೂ ದ್ವಾರಕೀಶ್ ಅವರ ಹತ್ತಿರದ ಸಂಬಂಧಿಯಾದ ವಕೀಲ ಎ.ವಾಮನಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT