ಸೋಮವಾರ, ಸೆಪ್ಟೆಂಬರ್ 27, 2021
22 °C

ಜನಪದ ಪರಿಷತ್‍ ಸಂಸ್ಥಾಪನಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜನಪದ ಪರಂಪರೆಯ ಬಗ್ಗೆ ನೂರಾರು ಸಂಶೋಧನೆಗಳು ನಡೆದಿದ್ದರೂ ಕಲಾವಿದರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಿಲ್ಲ ಎಂದು ಕನ್ನಡ ಜನಪದ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್. ಬಾಲಾಜಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ರಾಮನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಶುಕ್ರವಾರ ನಡೆದ ಪರಿಷತ್ತಿನ ತಾಲ್ಲೂಕು ಘಟಕ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜನಪದ ಇಂದು ಜಾಗತೀಕರಣದ ಗೊಂದಲಕ್ಕೆ ಈಡಾಗಿದೆ. ಇಂದಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪದ ಸೊಗಡು ನಶಿಸಿ ಹೋಗುತ್ತಿದೆ. ದೃಶ್ಯಮಾಧ್ಯಮಗಳಲ್ಲೂ ಜನಪದವನ್ನು ಕಡೆಗಣಿಸುತ್ತಿರುವುದು ದುರಂತ. ಸರ್ಕಾರ ಕಲಾವಿದರಿಗೆ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪರಿಷತ್ತಿನಿಂದ ಜನಪದ ಕಲಾವಿದರ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಪ್ರಶಸ್ತಿಗಳಿಂದ ವಂಚಿತರಾದ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ‘ಜನಪದ ಪ್ರಪಂಚ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಗೀತಾ ಬಿ. ಮಾಲತೇಶ್, ‘ಸರ್ಕಾರಿ ಶಾಲಾ-ಕಾಲೇಜು, ಮಠಗಳು, ವಸತಿನಿಲಯಗಳಲ್ಲಿ ಜನಪದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಪದ ಸಮ್ಮೇಳನ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಯುವಜನೋತ್ಸವದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆನಂದಗೌಡ ಪಾಟೀಲ್,  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಮಾತನಾಡಿದರು.

ಜನಪದ ಕಲಾವಿದೆ 110 ವರ್ಷದ ಕುಣುಕಿಬಾಯಿ ಅವರನ್ನು ಸನ್ಮಾನಿಸಲಾಯಿತು.

ಬಾಲಮಂದಿರದ ಅಧೀಕ್ಷಕರಾದ ಯಶೋದಮ್ಮ ಎಸ್., ಚಿಕ್ಕಪ್ಪ ಯಾದವ್, ಕೊಟ್ರೇಶ್, ಶ್ರೀಕಾಂತ ಬಗರೆ, ಮೊಹಮ್ಮದ್ ಗೌಸ್, ಸುರೇಶ್ ಕೆ.ಎನ್., ಗಿರಿಧರ್ ಟಿ.ವಿ., ಪೃಥ್ವಿ ಬಿ.ಎಂ. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು