ದಾವಣಗೆರೆ: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ₹ 4.5 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ, ಬೆಂಗಳೂರಿನಲ್ಲಿ ನೆಲೆಸಿರುವ ಅಶೋಕ್ ಕುಮಾರ ಬಂಧಿತ ಆರೋಪಿ. ನಗರದ ಕೆ.ಆರ್.ರಸ್ತೆಯ ಎಲ್.ಐ.ಸಿ ಕಚೇರಿ ಹಿಂಭಾಗದ ಬಿ.ಟಿ. ಲೇಔಟ್ನ ಉದ್ಯಾನದ ಮುಂಭಾಗದಲ್ಲಿ ಆರೋಪಿಯು ಮಾದಕ ವಸ್ತುಗಳನ್ನು ಮಾರುತ್ತಿದ್ದ.

ಆಫೀಮ್ ಮೊಗ್ಗಿನ ಒಣಗಿದ ಪೌಡರ್ (35 ಗ್ರಾಂ), ಎಂಡಿಎಂಎ ಕ್ಟಿಸ್ಟಲ್ (8 ಗ್ರಾಂ –ಗೋಧಿ ಬಣ್ಣದಂತಿರುವ) (15 ಗ್ರಾಂ –ಬಿಳಿ ಬಣ್ಣದ್ದು), ಒಪಿಯಂ ಪೇಸ್ಟ್ (7 ಗ್ರಾಂ) ಮಾದಕ ವಸ್ತುಗಳನ್ನು ಆರೋಪಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಜಾದ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಶ್ವಿನ್ ಕುಮಾರ್ ನೇತೃತ್ವದಲ್ಲಿ ಡಿಸಿಆರ್ಬಿ ಘಟಕದ ಸಿಬ್ಬಂದಿಯಾದ ಮಜೀದ್, ರಮೇಶ್ ನಾಯ್ಕ, ಕೆ.ಟಿ.ಆಂಜನೇಯ, ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ. ಕಾರ್ಯಾಚರಣೆ ನಡೆಸಿದ್ದರು.

ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.