ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಚರಂಡಿ ಸ್ವಚ್ಛತೆಗೆ ಕಾರ್ಮಿಕನ ಬಳಕೆ: ಎಫ್‌ಐಆರ್‌

Published 6 ಜನವರಿ 2024, 22:54 IST
Last Updated 6 ಜನವರಿ 2024, 22:54 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕಲ್ಯಾಣ ಮಂಟಪವೊಂದರಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಒಳಚರಂಡಿ ಸ್ವಚ್ಛತೆಗೆ ಚರಂಡಿಗೆ ಇಳಿಸಿದ ಪ್ರಕರಣ ಸಂಬಂಧ ಇಲ್ಲಿನ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕೂಲಿ ಕಾರ್ಮಿಕ ಸಿದ್ದೇಶ ಅವರನ್ನು ಒಳಚರಂಡಿಗೆ ಇಳಿಸಿದ ಸಂಬಂಧ ಪರಿಶೀಲನೆ ನಡೆಸಿದ್ದು, ಕೃತ್ಯ ಸಾಬೀತಾದ ಕಾರಣ ಕಲ್ಯಾಣ ಮಂಟಪದ ಮಾಲೀಕರು, ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಸಹಾಯಕ ಎಂಜಿನಿಯರ್‌ (ಯುಜಿಡಿ) ಪಿ.ಮಧುಸೂಧನ್‌ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಳಚರಂಡಿ ವ್ಯವಸ್ಥೆಯ ದುರವಸ್ಥೆ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸದೆ ಕಾರ್ಮಿಕನಿಂದ ಸ್ವಚ್ಛ ಮಾಡಿಸಲಾಗಿದೆ. ಈ ಸಂಬಂಧ ಮಾಲೀಕರು, ಮೇಲ್ವಿಚಾರಕರು ಹಾಗೂ ಇತರರ ವಿರುದ್ಧ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ– 2013 ಕಾಯ್ದೆ ಹಾಗೂ ಸೆಕ್ಷನ್– 20ರ ಅಡಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

‘ಕಿರಿಯ ಆರೋಗ್ಯ ನಿರೀಕ್ಷಕ ನಿಖಿಲ್ ಅವರೊಂದಿಗೆ ಕಲ್ಯಾಣ ಮಂಟಕ್ಕೆ ಭೇಟಿ ನೀಡಿದಾಗ ಒಳಚರಂಡಿ ಛೇಂಬರ್ ತೆರೆದಿತ್ತು. ಮೇಲ್ವಿಚಾರಕ ಮುಪ್ಪಯ್ಯ ಅವರು ಕಾರ್ಮಿಕ ಸಿದ್ದೇಶ ಅವರಿಂದ ಒಳಚರಂಡಿ ಸ್ವಚ್ಛಗೊಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT