ಭಾನುವಾರ, ಆಗಸ್ಟ್ 1, 2021
27 °C

ಕಸ್ಟಮರ್ ಕೇರ್ ಅಧಿಕಾರಿ ಹೆಸರಿನಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಯರಗುಂಟೆ ಗ್ರಾಮದ ಸೇಲ್ಸ್‌ಮ್ಯಾನ್‌ ಒಬ್ಬರಿಗೆ ₹39,996 ವಂಚಿಸಿದ್ದಾನೆ.

ಜಿ.ಎಂ. ಮಹಾಸ್ವಾಮಿ ವಂಚನೆಗೆ ಒಳಗಾದವರು. ಮಹಾಸ್ವಾಮಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದಾಗ ಹಣ ಕಡಿತಗೊಂಡಿರುವ ಬಗ್ಗೆ ಮೆಸೇಜ್ ಬಂದಿದೆ. ಆದರೆ ಹಣ ಬರಲಿಲ್ಲ. ಇದರಿಂದಾಗಿ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದಾಗ ಆತ ಹಿಂದಿಯಲ್ಲಿ ಮಾತನಾಡಿ ಎಟಿಎಂ ಕಾರ್ಡ್ ವಿವರಗಳನ್ನು ಪಡೆದಿದ್ದಾನೆ.

ವಿವರ ನೀಡಿದ ನಂತರ ನಾಲ್ಕು ಬಾರಿ ಹಣ ಕಡಿತಗೊಂಡಿದೆ. ಸಿಇಎನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.