ವಿವಿಧ ಗ್ರಾಮಗಳ ಭಕ್ತರು ಗಣೇಶನ ಮೂರ್ತಿ ಒಯ್ಯಲು ಟ್ರ್ಯಾಕ್ಟರ್, ಬೈಕ್, ಕಾರ್‌ಗಳಲ್ಲಿ ಬಂದಿದ್ದರು. ವಿವಿಧ ಕಲಾ ತಂಡಗಳೊಂದಿಗೆ ಗಣೇಶನಿಗೆ ಜೈ ಕಾರ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಕುಳಗಟ್ಟೆ, ಹನುಮನಹಳ್ಳಿ ಸೇರಿದಂತೆ ಕೆಲವು ಗ್ರಾಮದಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗ್ರಾಮದ 6 ಕುಟುಂಬದಿಂದ 500ಕ್ಕೂ ಹೆಚ್ಚು ಗಣಪನ ವಿಗ್ರಹ ತಯಾರಿಸಿಾಗಿದೆ. ಹನಗವಾಡಿ, ಚಿಕ್ಕಬಾಸೂರ ಹಾಗೂ ಕಲ್ಲಹಳ್ಳಿ ಗ್ರಾಮಗಳಲ್ಲಿ ಗಣೇಶನ ಮೂರ್ತಿ ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಕುಂಬಾರ್ ಬಸವರಾಜಪ್ಪ ತಿಳಿಸಿದರು.