ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ: ಜಿಟಿಟಿಸಿ ಕೇಂದ್ರಕ್ಕೆ ಎನ್‌ಬಿಎ ಮಾನ್ಯತೆ

Published : 26 ಸೆಪ್ಟೆಂಬರ್ 2024, 15:26 IST
Last Updated : 26 ಸೆಪ್ಟೆಂಬರ್ 2024, 15:26 IST
ಫಾಲೋ ಮಾಡಿ
Comments

ಹರಿಹರ: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿರುವ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ನಡೆಸುತ್ತಿರುವ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಕೋರ್ಸ್‌ಗೆ (ಡಿಟಿಡಿಎಂ) ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಷನ್ (ಎನ್‌ಬಿಎ– ರಾಷ್ಟ್ರೀಯ ಮಾನ್ಯತಾ ಮಂಡಳಿ) 2024–25ನೇ ಸಾಲಿನಿಂದ ಅನ್ವಯವಾಗುವಂತೆ ಮಾನ್ಯತೆ ನೀಡಿದೆ.

ರಾಜ್ಯದ 30 ಜಿಟಿಟಿಸಿ ಕಾಲೇಜುಗಳ ಪೈಕಿ ಹರಿಹರದ ಜಿಟಿಟಿಸಿ ಕಾಲೇಜಿನ ಡಿಟಿಡಿಎಂ ಕೋರ್ಸ್‌ಗೆ ಮಾತ್ರ ಈ ಮಾನ್ಯತೆ ದೊರೆತಿದೆ. ಇದರಿಂದ ಈ ಕಾಲೇಜಿನಲ್ಲಿ ಈ ಕೋರ್ಸ್ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶ ಹೆಚ್ಚಾಗುತ್ತದೆ. ಜೊತೆಗೆ ಇಲಾಖೆಯಿಂದ ಹೆಚ್ಚಿನ ಸೌಲಭ್ಯಗಳು ಸಿಗಲಿವೆ ಎಂದು ಪ್ರಾಚಾರ್ಯ ಶಿವಕುಮಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT