ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ ನಗರಸಭೆ 21ನೇ ವಾರ್ಡ್ ಕಾಂಗ್ರೆಸ್‌ ತೆಕ್ಕೆಗೆ

Last Updated 31 ಡಿಸೆಂಬರ್ 2021, 5:17 IST
ಅಕ್ಷರ ಗಾತ್ರ

ಹರಿಹರ: ಇಲ್ಲಿನ ನಗರಸಭೆ 21ನೇ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಶಹಜಾದ್‌ ಸನಾವುಲ್ಲಾ 114 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.

ಶಹಜಾದ್‌ ಸನಾಉಲ್ಲಾ 689, ಬಿಜೆಪಿಯ ಕುಸುಮಾ ರಾಯ್ಕರ್ 575, ಜೆಡಿಎಸ್‌ನ ವಿದ್ಯಾ ರಾಘವೇಂದ್ರ ಸಾ 344 ಮತಗಳನ್ನು ಪಡೆದರು. ನಗರದ ಗಾಂಧಿ ಮೈದಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮತ ಎಣಿಕೆ ನಡೆಯಿತು.

ಬಿಜೆಪಿಯ ನಗರಸಭಾ ಸದಸ್ಯೆ ನೀತಾ ಮೆಹರ‍್ವಾಡೆ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಶೇ 67.14 ರಷ್ಟು ಮತ ಚಲಾವಣೆಯಾಗಿತ್ತು. 6 ಮತಗಳು ನೋಟಾ ಆಗಿವೆ.

ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮತ್ತು ಮುಖಂಡರು ಗಾಂಧಿ ವೃತ್ತ, ರಾಣಿಚೆನ್ನಮ್ಮ ವೃತ್ತ ಹಾಗೂ ವಾರ್ಡಿನಲ್ಲಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಕ್ಷಗಳ ಬಲಾಬಲ: ನಗರಸಭೆಯಲ್ಲಿ ಒಟ್ಟು 31 ಸಂಖ್ಯಾ ಬಲದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 10 ಸದಸ್ಯರಿದ್ದು, ಈಗ ಕಾಂಗ್ರೆಸ್ ಸ್ಥಾನ ಬಲ 11ಕ್ಕೆ ಏರಿದೆ. ಜೆಡಿಎಸ್ 14 ಸದಸ್ಯರ ಬಲವಿದೆ. ಬಿಜೆಪಿ 5 ಸಂಖ್ಯಾಬಲ ಈಗ 4ಕ್ಕೆ ಇಳಿದಿದೆ. ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಶಾಸಕ ಎಸ್.ರಾಮಪ್ಪ, ನಗರಸಭೆ ಉಪಾಧ್ಯಕ್ಷ ಎಂ.ಎಸ್.ಬಾಬುಲಾಲ್, ಸದಸ್ಯರಾದ ಎಸ್.ಎಂ.ವಸಂತ್, ಕೆ.ಜಿ.ಸಿದ್ದೇಶ್, ಸೈಯದ್ ಅಲೀಂ, ನಗರಸಭೆ ಮಾಜಿ ಆಧ್ಯಕ್ಷ ಬಿ.ರೇವಣಸಿದ್ದಪ್ಪ, ಮುಖಂಡರಾದ ಸೈಯದ್ ಸನಾವುಲ್ಲಾ, ಸಿ.ಎನ್.ಹುಲಿಗೇಶ್, ಎನ್.ಎಚ್.ಶ್ರೀನಿವಾಸ್, ನಿಖಿಲ್ ಕೊಂಡಜ್ಜಿ, ಬಿ.ಸಿಗ್ಬತ್ ಉಲ್ಲಾ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT