ಹರಿಹರ: ಇಲ್ಲಿನ ಕೆಎಚ್‌ಬಿ ಕಾಲೊನಿಯಲ್ಲಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಕೆಎಚ್‌ಬಿ ಮುಖ್ಯ ರಸ್ತೆಯ ನಾಮಫಲಕ ಅನಾವರಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಣ್ಣ ಡಿ.ಯಾದವಾಡ ತಿಳಿಸಿದ್ದಾರೆ.
ಬೆಳಿಗ್ಗೆ 8ಕ್ಕೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ.ಸಿ.ವಿ.ಪಾಟೀಲ್ ಧ್ವಜಾರೋಹಣ ಮಾಡುವರು. ಬೆಳಿಗ್ಗೆ 11ಕ್ಕೆ ಹರಿಹರ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮಂಜುನಾಥ ಕುಪ್ಪೆಲೂರು ಅವರು ನಾಮಫಲಕ ಅನಾವರಣ ಗೊಳಿಸುವರು.
ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎಚ್.ಪ್ಯಾಟಿ, ಪ್ರದೀಪ ತೇಲ್ಕರ್, ಸತೀಶ ಎಸ್.ಹುಲಸೋಗಿ, ಪತ್ರಕರ್ತ ಶೇಖರಗೌಡ ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಗರಸಭೆ ಸದಸ್ಯ ದಿನೇಶ ಬಾಬು ಅಧ್ಯಕ್ಷತೆ ವಹಿಸುವರು.