ಬುಧವಾರ, ಜುಲೈ 6, 2022
22 °C

ಚಿಕ್ಕ ಅರಕೆರೆ: ಸಿಡಿಲಿಗೆ ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ತಾಲ್ಲೂಕಿನ ಚಿಕ್ಕಅರಕೆರೆ ಗ್ರಾಮದಲ್ಲಿ ಜಮೀನಿನಲ್ಲಿ ಶೇಂಗಾ ಕಟಾವು ಮಾಡುತ್ತಿದ್ದ ಸಮಯದಲ್ಲಿ ಸಿಡಿಲು ಬಡಿದು ರೈತರೊಬ್ಬರು ಸೋಮವಾರ ಸಂಜೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗ್ರಾಮದ ರಾಜಪ್ಪ (42) ಮೃತರು. ಹೊಲದಲ್ಲಿ ಶೇಂಗಾ ಕಟಾವು ಮಾಡುತ್ತಿದ್ದಾಗ ಭಾರಿ ಗುಡುಗು ಸಿಡಿಲಿನ ಹೊಡೆತಕ್ಕೆ ರಾಜಪ್ಪ ಸಾವನ್ನಪ್ಪಿದ್ದಾರೆ.

ಮೃತ ರಾಜಪ್ಪ ಅವರಿಗೆ ಇಬ್ಬರು ಮಕ್ಕಳು ಹಾಗು ಪತ್ನಿ ಇದ್ದಾರೆ. 3 ತಿಂಗಳ ಹಿಂದೆ ರಾಜಪ್ಪನ ತಂದೆ ಮತ್ತು ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದೀಗ ರಾಜಪ್ಪ ಸಾವಿನಿಂದ ಕುಟುಂಬ ಕಂಗಾಲಾಗಿದೆ.

ಬಿಳಿಚೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು