ಹೊನ್ನಾಳಿ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಆರಂಭವಾಗಿದ್ದು, ರೈತರು ಆ್ಯಪ್ ಮೂಲಕ ಸಮೀಕ್ಷೆಯ ವಿವರಗಳನ್ನು ಸ್ವತಃ ಪರಿಶೀಲನೆ ನಡೆಸಬಹುದು ಎಂದು ಹೊನ್ನಾಳಿ ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೇಳಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಅವರು, ಬೆಳೆ ಸಮೀಕ್ಷೆ ಕುರಿತಂತೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.

ಬೆಳೆ ಸಮೀಕ್ಷೆ ಉದ್ದೇಶದಿಂದ ಕೃಷಿ ಇಲಾಖೆಯು ಆಯಾ ಗ್ರಾಮಗಳಲ್ಲಿ ನೇಮಿಸಿರುವ ಪಿ.ಆರ್ಗಳ (ಪ್ರೈವೇಟ್ ರೆಸಿಡೆಂಟ್) ನೆರವಿನಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ನಮೂದಿಸಬೇಕು. ಪಹಣಿಯಲ್ಲಿ ಬೆಳೆ ನಮೂದಾಗುವ ಹಾಗೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳೆ ವಿಮೆ, ಬೆಳೆ ಸಾಲ, ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟ ಮತ್ತು ಬೆಳೆ ಪರಿಹಾರ ಸೇರಿ ವಿವಿಧ ಕಾರಣಕ್ಕೆ ಮೊಬೈಲ್ ಬೆಳೆ ಸಮೀಕ್ಷೆ ಮಹತ್ವದ್ದಾಗಿದ್ದು, ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಯ ಮಾಹಿತಿ ಸರಿಯಿದೆಯೇ ಎಂದು ರೈತರು ಸ್ವತಃ ಪರಿಶೀಲಿಸಲು ಅವಕಾಶವಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ‘ಬೆಳೆ ದರ್ಶಕ್’ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಒಂದು ವೇಳೆ ವ್ಯತ್ಯಾಸ ಕಂಡುಬಂದಲ್ಲಿ, ಆಕ್ಷೇಪಣೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ನೇಮಿಸಿರುವ ಮೇಲ್ವಿಚಾರಕರ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ಕೃಷಿ ಅಧಿಕಾರಿ ಅತೀಕ್ ಉಲ್ಲಾ ಹೇಳಿದರು.

ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮದ ಪಿ.ಆರ್. ಸಂಜೀವ್, ಸಂಜೀವಿನಿ ವಾಹನ ಚಾಲಕ ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.