ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹ

Published : 8 ಜೂನ್ 2023, 13:02 IST
Last Updated : 8 ಜೂನ್ 2023, 13:02 IST
ಫಾಲೋ ಮಾಡಿ
Comments

ಹರಿಹರ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹರಿಹರ ತಾಲ್ಲೂಕು ಕ್ರೀಡಾಪಟುಗಳ ಸಂಘದ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಳಿಕ ತಹಶೀಲ್ದಾರ್ ಪೃಥ್ವಿ ಸಾನಿಕಾಂ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಜಮಾಯಿಸಿದ ಕ್ರೀಡಾಪಟುಗಳು ಗಾಂಧಿ ವೃತ್ತದ ಮೂಲಕ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.

ಕ್ರೀಡಾ ಅಭಿಮಾನಿಗಳು, ಪ್ರಗತಿಪರ ಚಿಂತಕರು, ಕನ್ನಡಪರ ಸಂಘಟನೆ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾಹಿತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಿರಿಯ ಕ್ರೀಡಾಪಟುಗಳಾದ ಎಚ್.ನಿಜಗುಣ, ಬಿ.ರೇವಣಸಿದ್ದಪ್ಪ, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ನಗರಸಭಾ ಸದಸ್ಯ ಶಂಕರ್ ಖಟಾವ್‌ಕರ್, ವಕೀಲರ ಸಂಘದ ಕಾರ್ಯದರ್ಶಿ ಗಣೇಶ್ ಕೆ.ದುರ್ಗದ್, ಮಹಮ್ಮದ್ ಅಲಿ, ನಿಂಗಪ್ಪ, ವೈ.ರಘುಪತಿ, ಸದಾಶಿವ, ಬಸವರಾಜ್, ಮಹದೇವ, ಗೋವಿಂದಪ್ಪ, ಭದ್ರಪ್ಪ, ದೇವೇಂದ್ರಪ್ಪ, ಶಂಕರ್ ಮೂರ್ತಿ, ಸಿ.ಎನ್. ಮಂಜುನಾಥ್, ಕೇಶವ, ನಾಗರಾಜ್, ರಾಜು, ಮಂಜುನಾಥ್, ಮೊಹಮ್ಮದ್ ಅಲಿ, ಮಂಜುಳಾ, ಶ್ರೀದೇವಿ, ರಾಮಚಂದ್ರಪ್ಪ, ಕರುಣಾಕರ್, ಮಲ್ಲೇಶ್, ಬಸವರಾಜ್, ಧನು, ಚನ್ನಬಸಪ್ಪ, ಪ್ರವೀಣ್ ಬಿಳಸನೂರು, ಪ್ರವೀಣ್ ವಿರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT