ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜನವರಿ 6ರಂದು ಭೂಮಿಕಾ ಕ್ಲಬ್‌ ಉದ್ಘಾಟನೆ

Published 4 ಜನವರಿ 2024, 14:58 IST
Last Updated 4 ಜನವರಿ 2024, 14:58 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ‘ಭೂಮಿಕಾ ಕ್ಲಬ್‌’ ವೇದಿಕೆಯು ಜನವರಿ 6ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.

‘ಫ್ರೀಡಂ ಆಯಿಲ್‌’ ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯುವ ಕಾರ್ಯಕ್ರಮಕ್ಕೆ ಸದ್ಗುರು ಆಯುರ್ವೇದದ ಸಹಯೋಗವಿದೆ.

ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಎಸ್‌.ಎಸ್‌. ಕೇರ್‌ ಟ್ರಸ್ಟ್‌ನ ಟ್ರಸ್ಟಿ ಡಾ. ‍ಪ್ರಭಾ ಮಲ್ಲಿಕಾರ್ಜುನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಉದ್ಘಾಟಿಸುವರು. 

ರೇವತಿ ಎಸ್‌. ಅಡಿಗ ಅವರು ಅಡುಗೆ ಕಾರ್ಯಕ್ರಮ ನಡೆಸಿಕೊಡುವರು. ನಮನ ಅಕಾಡೆಮಿಯಿಂದ ನೃತ್ಯ ಪ್ರದರ್ಶನ, ಯಶಾ ದಿನೇಸ್‌ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ಯಾಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ನೀತು ಜಿ.ವಿ. ಅವರು ‘ಮೆನ್ಟ್ರ್ರುವಲ್ ಕಪ್‌ ಬಳಕೆ’ಯ ಬಗ್ಗೆ, ಕಾಲೇಜಿನ ಒಬಿಜಿ ವಿಭಾಗದ ಪ್ರಾಧ್ಯಾಪಕಿ ಡಾ. ಶೋಭಾ ಧನಂಜಯ ಮಹಿಳೆಯರಿಗೆ ಪೌಷ್ಠಿಕಾಂಶದ ಕುರಿತು ಉಪನ್ಯಾಸ ನೀಡುವರು. 

ಹೊಸ ವಿಷಯಗಳನ್ನು ಕಲಿಯಲು, ಸಮಾನ ಮನಸ್ಕ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು, ಸೃಜನಶೀಲತೆ ಪ್ರದರ್ಶಿಸಲು, ಆರೋಗ್ಯ ಮತ್ತು ಕ್ಷೇಮದ ಜಗತ್ತಿನ ಬಗ್ಗೆ ಮಾಹಿತಿ ಪಡೆಯಲು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT