ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಸೊಲಾರ್ ಡ್ರಯರ್‌ಗೆ ರಾಜ್ಯದಾದ್ಯಂತ ಹೆಚ್ಚಿದ ಬೇಡಿಕೆ

ಹೊನ್ನೆಮರದಹಳ್ಳಿ ಸಾಫ್ಟ್‌ವೇರ್‌ ಎಂಜಿನಿಯರ್ ರಘು ಅವರಿಂದ ಅನ್ವೇಷಣೆ
Last Updated 15 ಜನವರಿ 2022, 6:35 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಮೀಪದ ಹೊನ್ನೆಮರದಹಳ್ಳಿ ಸಾಫ್ಟ್‌ವೇರ್‌ ಎಂಜಿನಿಯರ್ ರಘು ಟಿ.ಆರ್‌. ಅವರು ಆವಿಷ್ಕರಿಸಿರುವ ಸೋಲಾರ್ ಅಡಿಕೆ ಡ್ರಯರ್‌ಗೆ ಮಲೆನಾಡು ಸೇರಿ ರಾಜ್ಯದಾದ್ಯಂತ ಬೇಡಿಕೆ ಹೆಚ್ಚುತ್ತಿದೆ.

ಸರಳ ವಿಜ್ಞಾನದ ಅನ್ವಯಗಳ ನೆಲೆಯಲ್ಲಿ ರೂಪಿಸಿರುವ ಡ್ರಯರ್ ಅಡಿಕೆ ಬೆಳೆಗಾರನಿಗೆ ಶ್ರಮ, ಖರ್ಚು, ಕಾಲ ಉಳಿಸುವ ಪರಿಣಾಮಕಾರಿ ಸಾಧನವಾಗಿ ಹೊರಹೊಮ್ಮಿದೆ.

ಕಳೆದ ಅಕ್ಟೋಬರ್-21ರಂದು ಈ ಕುರಿತು ‘ಪ್ರಜಾವಾಣಿ’ಯಲ್ಲಿ ವಿಡಿಯೊ ಸಹಿತ ವಿಶೇಷ ವರದಿ ಪ್ರಕಟವಾಗಿತ್ತು. ಅಂದಿನಿಂದ ರೈತರು ರಘು ಅವರನ್ನು ಅವರ ಗ್ರಾಮದಲ್ಲಿ ಭೇಟಿ ಮಾಡಿ ಮಾಹಿತಿ ಪಡೆದರು. ರೈತರ ಬೇಡಿಕೆಯಂತೆ ಕೆಲ ತಾಂತ್ರಿಕ ಮಾರ್ಪಾಡುಗಳನ್ನು ಮಾಡಲಾಗಿದೆ. ನೀರಿಲ್ಲದೆ, ವಿದ್ಯುತ್ ಮೂಲಕವೂ ಅಡಿಕೆ ಬೇಯಿಸಿ ಒಣಗಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಸದ್ಯ ಹೊನ್ನೆಮರದಹಳ್ಳಿಯಲ್ಲಿಯೇ ಡ್ರಯರ್‌ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ಇದುವರೆಗೆ 45 ಸೊಲಾರ್ ಡ್ರಯರ್‌ಗಳನ್ನು ಉತ್ಪಾದಿಸಿ ರೈತರಿಗೆ ಮಾರಾಟ ಮಾಡಲಾಗಿದೆ. ಪ್ರತಿ ಡ್ರಯರ್ ಬೆಲೆ ₹ 75 ಸಾವಿರ ನಿಗದಿಗೊಳಿಸಲಾಗಿದೆ. ಜೊತೆಗೆ ಜಿಎಸ್‌ಟಿ ಸೇರಿಸಲಾಗುತ್ತಿದೆ.

ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಹಾಸನ, ಚಿಕ್ಕಮಗಳೂರು, ಶೃಂಗೇರಿ ವ್ಯಾಪ್ತಿಯಲ್ಲಿ ವಿತರಿಸಲಾಗಿದೆ. ಮಾರ್ಚ್–ಏಪ್ರಿಲ್ ತಿಂಗಳಲ್ಲಿ 100 ಡ್ರಯರ್‌ಗೆ ಮುಂಗಡ ಬುಕ್ಕಿಂಗ್ ಮಾಡಲಾಗಿದೆ. ಸೆಪ್ಟೆಂಬರ್-22ರ ವರೆಗೆ ಸೊಲಾರ್ ಡ್ರಯರ್ ಬುಕ್ಕಿಂಗ್ ಆಗಿವೆ. ಒಂದು ಡ್ರಯರ್‌ನಲ್ಲಿ ಮೂರೂವರೆ ಕ್ವಿಂಟಲ್ ಅಡಿಕೆ ಒಣಗಿಸಬಹುದು. ನಾಲ್ಕು ಗಂಟೆಗಳಲ್ಲಿ ಒಣಗಲು ಉಷ್ಣಾಂಶ ನಿಯಂತ್ರಿತ ಸಾಧನಗಳಿಂದ ಅಭಿವೃದ್ಧಿಪಡಿಸಲಾಗಿದೆ. ಅಡಿಕೆಯನ್ನು ಡ್ರಯರ್ ಒಳಗೆ ತುಂಬಲು, ಹೊರತೆಗೆಯಲು ಪೂರಕ ಬಾಗಿಲುಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ ಸಂಶೋಧಕ ರಘು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT