ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: ಹೆಚ್ಚಿದ ಉಷ್ಣಾಂಶ, ಜನರ ಪರದಾಟ

Last Updated 27 ಏಪ್ರಿಲ್ 2019, 13:43 IST
ಅಕ್ಷರ ಗಾತ್ರ

ಹೊನ್ನಾಳಿ: ಪಟ್ಟಣದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಿದ್ದು, ಜನರು ಪರದಾಡುವಂತಾಗಿದೆ.

ಇಷ್ಟೊಂದು ಸರಾಸರಿ 39 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇದ್ದು, ಇಷ್ಟೊಂದು ಪ್ರಮಾಣದ ಉಷ್ಣಾಂಶ ಎಂದೂ ಕಂಡಿರಲಿಲ್ಲ. ಬೆಳಿಗ್ಗೆ 10ರಿಂದ ಬಿಸಿಲಿನ ತೀವ್ರತೆ ಹೆಚ್ಚುತ್ತಾ ಹೋಗುತ್ತಿದೆ ಎಂದು ಹಿರಿಯರು ಹೇಳುತ್ತಾರೆ.

ಬಿಸಿಲಿಗೆ ಹೆದರಿ ಜನರ ಸಂಚಾರ ಕಡಿಮೆಯಾಗಿದೆ. ಕೆಲಸದ ನಿಮಿತ್ತ ಬಂದವರು ಮರದ ನೆರಳು, ಸರ್ಕಾರಿ ಕಟ್ಟಡಗಳಲ್ಲಿನ ನೆರಳನ್ನು ಆಶ್ರಯಿಸುತ್ತಾರೆ. ಕೆಲವರು ಸರ್ಕಾರಿ ಕೆಲಸ ಕಾರ್ಯಗಳಿಗೆ ಬಂದವರು ಕಟ್ಟಡದ ಮುಂಭಾಗದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ವಯಸ್ಸಾದವರು ಹೆಚ್ಚಾಗಿ ಸುಸ್ತು ಎಂದು ಹೇಳಿಕೊಂಡು ಚಿಕಿತ್ಸೆಗೆ ಬರುತ್ತಾರೆ. ಅದಕ್ಕೆ ಕಾರಣ ಡಿಹೈಡ್ರೇಶನ್. ಇದರಿಂದ ವಾಂತಿ, ಭೇದಿ, ಜ್ವರ ಹೆಚ್ಚಾಗುವ ಅಪಾಯಗಳೂ ಇವೆ. ಹೆಚ್ಚಾಗಿ ಶುದ್ಧ ನೀರು, ಎಳನೀರು ಕುಡಿಯಬೇಕು. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರೂ ಹೆಚ್ಚಾಗಿ ನೀರು ಕುಡಿಯಬೇಕು. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯಾಧಿಕಾರಿ ಡಾ. ಚಂದ್ರಪ್ಪ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT