ಹೊನ್ನಾಳಿ : ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜೋಕುಮಾರನ ಏಳು ಗ್ರಾಮಗಳ ಪರ್ಯಟನೆ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಿತು.

ಗುರುವಾರ ಅಂಬಿಗ ಸಮಾಜದ ಮಹಿಳೆಯರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಿರೇಗೋಣಿಗೆರೆ, ಹರಗನಹಳ್ಳಿ, ಕೋಣನತಲೆ, ಚಿಕ್ಕಗೋಣಿಗೆರೆ, ಹೊನ್ನೂರು ವಡ್ಡರಹಟ್ಟಿ ತಾಂಡ, ಕೋಟೆಮಲ್ಲೂರು, ಬೇಲಿಮಲ್ಲೂರು ಸೇರಿ ಏಳೂರು ಗ್ರಾಮಗಳಿಗೆ ತೆರಳಿ ಮನೆಗಳಲ್ಲಿ ನೀಡುವ ಧವಸ ಧಾನ್ಯಗಳನ್ನು ಸಂಗ್ರಹಿಸಿ ಏಳು ದಿನದ ನಂತರ ಬರುವ ಹುಣ್ಣಿಮೆಯಂದು ಜೋಕುಮಾರಸ್ವಾಮಿಯನ್ನು ನದಿಯ ದಡದಲ್ಲಿನ ಮಡಿವಾಳರ ಕಲ್ಲಿನ ಪೊದೆಯೊಳಗೆ ಇಟ್ಟು ಬರುವರು, ನಂತರ ಸಂಪ್ರದಾಯದಂತೆ ಮಡಿವಾಳ ಸಮಾಜದವರು ಜೋಕುಮಾರನ ಪುಣ್ಯತಿಥಿಯುನ್ನು ನೆರವೇರಿಸುವರು ಎಂದು ಗ್ರಾಮದ ಮುಖಂಡ ಸುರೇಶ್ ಬಿಸಲೇರಿ ತಿಳಿಸಿದರು.

ಹೊನ್ನಾಳಿ ತಾ ಹಿರೆಗೋಣಿಗೆರೆ ಗ್ರಾಮದಲ್ಲಿ ಜೋಕುಮಾರನ ಕುರಿತು ಪುರಾಣದ ಕಥೆ ಹೇಳುತ್ತಿರುವ ಅಂಬಿಗ ಸಮಾಜದ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.